Select Your Language

Notifications

webdunia
webdunia
webdunia
webdunia

ಗ್ರೇಟರ್ ನೊಯ್ಡಾ ಗ್ಯಾಂಗ್‌ರೇಪ್ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್

ಗ್ರೇಟರ್ ನೊಯ್ಡಾ ಗ್ಯಾಂಗ್‌ರೇಪ್ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್
ಗ್ರೇಟರ್ ನೊಯ್ಡಾ , ಗುರುವಾರ, 22 ಜೂನ್ 2017 (16:40 IST)
ಚಲಿಸುತ್ತಿರುವ ಕಾರಿನಲ್ಲಿ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್‌ರೇಪ್ ಎಸಗಿ ನಂತರ ಆಕೆಯನ್ನು ರಸ್ತೆ ಬದಿಗೆ ಬಿಸಾಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಹರಿಯಾಣಾದ ಸೋಹನಾ ಪ್ರದೇಶದಲ್ಲಿ ಗುರುಗ್ರಾಮ ಮೂಲದ ಮಹಿಳೆ ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ತೆರಳುತ್ತಿರುವ ಸಂದರ್ಭದಲ್ಲಿ ಮೂವರು ಕಾಮುಕರು ಸ್ವಿಫ್ಟ್ ಕಾರಿನಲ್ಲಿ ಆಕೆಯನ್ನು ಅಪಹರಿಸಿ, ಚಲಿಸುತ್ತಿರುವ ಕಾರಿನಲ್ಲಿಯೇ ಗ್ಯಾಂಗ್‌ರೇಪ್ ಎಸಗಿದ್ದರು.
 
ಮಹಿಳೆ ಪ್ರಜ್ಞೆ ಕಳೆದುಕೊಂಡಿರುವುದನ್ನು ಗಮನಿಸಿದ ಆರೋಪಿಗಳು ಆಕೆಯನ್ನು ಗ್ರೇಟರ್ ನೊಯ್ಡಾದಲ್ಲಿರುವ ರಸ್ತೆ ಬದಿಗೆ ಬಿಸಾಕಿ ಪರಾರಿಯಾಗಿದ್ದರು. 
 
ಪ್ರಜ್ಞೆ ಮರಳಿದ ನಂತರ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ ಕಾಸ್ನಾ ಠಾಣೆಯ ಪೊಲೀಸರು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಅವರ ವಿರುದ್ಧ ಗ್ಯಾಂಗ್‌ರೇಪ್, ಅಪಹರಣ, ಜೀವ ಬೆದರಿಕೆ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘಾನಿಸ್ತಾನ್: ಕಾರ್ ಬಾಂಬ್ ಸ್ಫೋಟಕ್ಕೆ 20 ಬಲಿ, 50 ಜನರಿಗೆ ಗಾಯ