Select Your Language

Notifications

webdunia
webdunia
webdunia
webdunia

ಅಫ್ಘಾನಿಸ್ತಾನ್: ಕಾರ್ ಬಾಂಬ್ ಸ್ಫೋಟಕ್ಕೆ 20 ಬಲಿ, 50 ಜನರಿಗೆ ಗಾಯ

ಅಫ್ಘಾನಿಸ್ತಾನ್: ಕಾರ್ ಬಾಂಬ್ ಸ್ಫೋಟಕ್ಕೆ 20 ಬಲಿ, 50 ಜನರಿಗೆ ಗಾಯ
ಲಷ್ಕರ್ ಗಾಹ್(ಅಫ್ಘಾನಿಸ್ತಾನ್) , ಗುರುವಾರ, 22 ಜೂನ್ 2017 (16:23 IST)
ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 20 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
 
ದಕ್ಷಿಣ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಜನನಿಬಿಡ ಪ್ರದೇಶದಲ್ಲಿ ಕಾರ್ ಬಾಂಬ್ ಸ್ಫೋಟಿಸಿದ್ದರಿಂದ ಹೆಚ್ಚಿನ ಸಾವು ನೋವು ಉಂಟಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ 20 ಜನರು ಸಾವನ್ನಪ್ಪಿದ್ದು 50 ಕ್ಕೂ ಹೆಚ್ಚು ಮಂದಿ ಗಂಬೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸರಕಾರಿ ವಕ್ತಾರ ಒಮರ್ ಝವಾಕ್ ತಿಳಿಸಿದ್ದಾರೆ.
 
ಕಳೆದ ಕೆಲ ದಿನಗಳ ಹಿಂದೆ ಭಾರತೀಯ ರಾಯಭಾರಿ ಕಚೇರಿಯ ಬಳಿ ಉಗ್ರರು ಆತ್ಮಾಹುತಿ ದಾಳಿ ನಡೆಸಿ ಹಲವರ ಸಾವಿಗೆ ಕಾರಣವಾಗಿದ್ದರು. ಇದೀಗ ಮತ್ತೆ ಉಗ್ರರು ಮಾರಣಹೋಮ ನಡೆಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಪಿ.ನಂಜುಂಡಿಗೆ ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ: ರಘು ಆಚಾರ್