Select Your Language

Notifications

webdunia
webdunia
webdunia
webdunia

ಮಗಳಿಗೆ ಪ್ರತ್ಯೇಕ ಕ್ಯಾಬಿನ್ ನೀಡುವಂತೆ ಧಮ್ಕಿ: ಪೂಜಾ ಖೇಡ್ಕರ್ ತಂದೆ ವಿರುದ್ಧ ದೂರು

ಮಗಳಿಗೆ ಪ್ರತ್ಯೇಕ ಕ್ಯಾಬಿನ್ ನೀಡುವಂತೆ ಧಮ್ಕಿ: ಪೂಜಾ ಖೇಡ್ಕರ್ ತಂದೆ ವಿರುದ್ಧ ದೂರು

Sampriya

ಪುಣೆ , ಶುಕ್ರವಾರ, 9 ಆಗಸ್ಟ್ 2024 (21:12 IST)
Photo Courtesy X
ಪುಣೆ: ಮಾಜಿ ಐಎಎಸ್ ತರಬೇತಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕಾ ವಿರುದ್ಧ ಪ್ರಕರಣ ದಾಖಲಾಗಿದೆ.

ಪುಣೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂಜಾ ಖೇಡ್ಕರ್ ಅವರನ್ನು ನಿಯೋಜಿಸಿದಾಗ, ದಿಲೀಪ್ ಖೇಡ್ಕರ್ ಅವರು ಜೂನ್‌ನಲ್ಲಿ ಪೂಜಾ ಅವರಿಗೆ ಪ್ರತ್ಯೇಕ ಕೊಠಡಿ ನೀಡುವಂತೆ ತಹಶೀಲ್ದಾರರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

‌ಗುರುವಾರ ರಾತ್ರಿ ಬಂಡ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದಿಲೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ಪೊಲೀಸ್ ಡಿಸಿಪಿ ಸ್ಮಾರ್ಥನಾ ಪಾಟೀಲ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ  ಸೆಕ್ಷನ್ 186 (ಯಾವುದೇ ಸಾರ್ವಜನಿಕ ನೌಕರನ ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸಲು ಸ್ವಯಂಪ್ರೇರಣೆಯಿಂದ ಅಡ್ಡಿಪಡಿಸುತ್ತದೆ), 504 (ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಮತ್ತು
506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಪೂಜಾ ಖೇಡ್ಕರ್ ಅವರು ಸಹಾಯಕ ಕಲೆಕ್ಟರ್ ಆಗಿ ನೇಮಕಗೊಂಡ ಸಂದರ್ಭದಲ್ಲಿ, ತನ್ನ ಮಗಳಿಗೆ ಪ್ರತ್ಯೇಕ ಕ್ಯಾಬಿನ್ ನೀಡುವಂತೆ ತಹಸೀಲ್ದಾರ್ ದೀಪಕ್ ಅಕಾಡೆ ಅವರಿಗೆ ದಿಲೀಪ್ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾಡಳಿತದಿಂದ ದೂರನ್ನು ಸ್ವೀಕರಿಸಿದ ನಂತರ, ನಾವು ದಿಲೀಪ್ ಖೇಡ್ಕರ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳಿಗೆ ಸಾರ್ವಜನಿಕ ಸೇವೆಗೆ ಅಡ್ಡಿ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. )," ಎಂದು ಪುಣೆ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡ್ ಭೂಕುಸಿತ ಪ್ರದೇಶಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ