Select Your Language

Notifications

webdunia
webdunia
webdunia
webdunia

ನಕಲಿ ಜಾತಿ ಪ್ರಮಾಣಪತ್ರ ಬಳಸಿ ಪದವಿ, ಕೆಲಸ ಗಿಟ್ಟಿಸಿಕೊಂಡಿದ್ದವರಿಗೆ ಶುರುವಾಯ್ತು ಕಂಟಕ

ನಕಲಿ ಜಾತಿ ಪ್ರಮಾಣಪತ್ರ ಬಳಸಿ ಪದವಿ, ಕೆಲಸ ಗಿಟ್ಟಿಸಿಕೊಂಡಿದ್ದವರಿಗೆ ಶುರುವಾಯ್ತು ಕಂಟಕ
ನವದೆಹಲಿ , ಗುರುವಾರ, 6 ಜುಲೈ 2017 (13:00 IST)
ನಕಲಿ ಜಾತಿ ಪ್ರಮಾಣಪತ್ರ ಬಳಸಿ ಪದವಿ ಮತ್ತು ಕೆಲಸ ಗಿಟ್ಟಿಸಿಕೊಂಡಿದ್ದರೆ ಮುಲಾಜಿಲ್ಲದೇ ಎರಡನ್ನೂ ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಷ್ಟೇ ಅಲ್ಲ, ಇದರ ಜೊತೆಗೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆಂದು ಕೋರ್ಟ್ ಹೇಳಿದೆ.
 

ನಕಲಿ ಜಾತಿಪ್ರಮಾಣಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಪ್ರಕರಣ ಕುರಿತಂತೆ  ತೀರ್ಪು ನೀಡಿರುವ ಕೋರ್ಟ್, ಎಷ್ಟು ವರ್ಷ ಕೆಲಸ ಮಾಡಿದ್ದಾರೆಂಬ ಪರಿಗಣನೆ ತೆಗೆದುಕೊಳ್ಳುವುದೇ ಇಲ್ಲ. ಮುಲಾಜಿಲ್ಲದೆ ಕೆಲಸದಿಂದ ವಜಾ ಮಾಡಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

`ಒಂದು ನಕಲಿ ಪ್ರಮಾಣಪತ್ರ ನೀಡಿ ಕೆಲಸ ಪಡೆದಿದ್ದ ವ್ಯಕ್ತಿ 20 ವರ್ಷ ಸೇವೆ ಸಲ್ಲಿಸಿದ್ರೂ ತ ಕೆಲಸ ಕಳೆದುಕೊಳ್ಳುವ ಜೊತೆಗೆ ಶಿಕ್ಷೆಯನ್ನೂ ಅನುಭವಿಸಬೇಕು, ದೀರ್ಘ ಕಾಲದ ಸೇವೆಯನ್ನ ಪರಿಗಣಿಸಿ ಯಾವುದೇ ಉದಾರತೆ ತೋರಲಾಗುದಿಲ್ಲ ಎಂದು ಹೇಳಿದೆ.

 ಕಳದ ತಿಂಗಳಷ್ಟೇ ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, ಎಸ್`ಸಿ-ಎಸ್`ಟಿ, ಹಿಂದುಳಿದ ವರ್ಗಗಳ ನಕಲಿ ಪ್ರಮಾಣಪತ್ರ ನೀಡಿ ಕೆಲಸಕ್ಕೆ ಸೇರಿದವರನ್ನ ವಜಾ ಮಾಡುವುದಾಗಿ ಹೇಳಿತ್ತು. ಜೊತೆಗೆ, ಆ ರೀತಿಯ ಉದ್ಯೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸಿತ್ತು.

ಈ ಬಗ್ಗೆ ಲೋಕಸಭೆ ಲಿಖಿತ ಹೇಳಿಕೆ ನೀಡಿದ್ದ ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದು ಕೊರತೆಗಳ ಇಲಾಖೆಯ ರಾಜ್ಯ ಸಚಿವ ಜಿತೆಂದ್ರ ಸಿಂಗ್, 1832 ಉದ್ಯೋಗಿಗಳು ನಕಲಿ ಪ್ರಮಾಣಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮಿಯರಿಂದಲೇ ನನ್ನ ವಿರುದ್ಧ ಕುತಂತ್ರ: ಪೇಜಾವರ ಶ್ರೀ