Select Your Language

Notifications

webdunia
webdunia
webdunia
webdunia

ಉಗ್ರರನ್ನು ರಕ್ಷಿಸುವವರನ್ನು ಸುಮ್ಮನೆ ಬಿಡೋಲ್ಲ: ಪ್ರಧಾನಿ ಮೋದಿ ಗುಡುಗು

ಉಗ್ರರನ್ನು ರಕ್ಷಿಸುವವರನ್ನು ಸುಮ್ಮನೆ ಬಿಡೋಲ್ಲ: ಪ್ರಧಾನಿ ಮೋದಿ ಗುಡುಗು
ಲಕ್ನೋ , ಬುಧವಾರ, 12 ಅಕ್ಟೋಬರ್ 2016 (14:03 IST)
ಉಗ್ರರಿಗೆ ರಕ್ಷಣೆ ನೀಡಿ ಅಗತ್ಯ ಸೌಲಭ್ಯಗಳನ್ನು ಒದಗಿಸುವವರಿಗೆ ತಕ್ಕ ಶಿಕ್ಷೆ ಕಾದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.
 
ಭಾರತ ದೇಶದ ಸದಾ ಶಾಂತಿಯುತವಾದ ಮಾರ್ಗವನ್ನು ಅನುಸರಿಸುತ್ತದೆ. ಒಂದು ವೇಳೆ ಯುದ್ಧ ಅನಿವಾರ್ಯವಾದರೆ, ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
 
ನಾವು ಯುದ್ಧಕ್ಕಿಂತ ಬುದ್ಧನ ಮಾರ್ಗ ಅನುಸರಿಸಲು ಬಯಸುತ್ತೇವೆ. ಯುದ್ಧ ಮತ್ತು ಶಾಂತಿಯ ಮಧ್ಯದಲ್ಲಿ ಸಮತೋಲನವಿಡಲು ಬಯಸುತ್ತೇವೆ. ಭಾರತ ತಾಳ್ಮೆಯನ್ನು ಪರಿಕ್ಷೀಸುವುದು ಬೇಡ. ಇಲ್ಲವಾದಲ್ಲಿ ತಕ್ಕ ಪರಿಣಾಮ ಎದುರಿಸಲು ಸಿದ್ದರಾಗಿ ಎಂದು ಕಿಡಿಕಾರಿದ್ದಾರೆ.  
 
ಪ್ರಧಾನಿ ಮೋದಿ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆ, ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದಲ್ಲಿ ಉಗ್ರರ ನಡೆಸಿದ ದಾಳಿಗೆ 19 ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಪಿಒಕೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. 
 
ಭಯೋತ್ಪಾದನೆಯನ್ನು ಹೊಡೆದೊಡಿಸದೆ ಮಾನವತೆಯ ರಕ್ಷಣೆ ಸಾಧ್ಯವಿಲ್ಲ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೋನಿಕಾ ಘುರ್ಡೆ ಹತ್ಯೆ ಪ್ರಕರಣ: ಇಲ್ಲಿದೆ ಬೆಚ್ಚಿ ಬೀಳಿಸುವ ಸಂಪೂರ್ಣ ಕಥಾನಕ