ಇದೇನಿದು ಇಷ್ಟೊಂದು ಹೀನಾಯ : ಬಾಲಕಿಗೆ ಲೈಂಗಿಕ ಕಿರುಕುಳ, ಸ್ಯಾನಿಟೈಸರ್ ಕುಡಿಸಿ ಹತ್ಯೆಗೈದ ಪುಂಡರ ಗುಂಪು!

Webdunia
ಗುರುವಾರ, 3 ಆಗಸ್ಟ್ 2023 (10:14 IST)
ಲಕ್ನೋ :   ಪುರುಷರ ಗುಂಪೊಂದು ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟು, ಸ್ಯಾನಿಟೈಸರ್ ಕುಡಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬಾಲಕಿಯ ಕುಟುಂಬಸ್ಥರು ಹಾಗೂ ಸಂಬಂಧಿಕರು ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು.
 
ರಸ್ತೆ ತಡೆಯಿಂದಾಗಿ ಎರಡು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಜುಲೈ 27 ರಂದು, 11 ನೇ ತರಗತಿಯ ವಿದ್ಯಾರ್ಥಿನಿ, ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ, ಆರೋಪಿಗಳಲ್ಲಿ ಒಬ್ಬನಾದ ಮಠ ಲಕ್ಷ್ಮೀಪುರ ಪ್ರದೇಶದ ನಿವಾಸಿ ಉದೇಶ್ ರಾಥೋರ್ (21) ಅವಳನ್ನು ತಡೆದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ರಾಥೋರ್ ಅವರೊಂದಿಗೆ ಇತರ ಮೂವರು ಪುರುಷರು ಸೇರಿಕೊಂಡರು ಮತ್ತು ಹುಡುಗಿ ಅವರ ಕಿರುಕುಳದ ಪ್ರಯತ್ನವನ್ನು ವಿರೋಧಿಸಿದಾಗ, ಅವರು ಸ್ಯಾನಿಟೈಸರ್ ಅವರು ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ್ದಾರೆ.

ಸಂತ್ರಸ್ತೆಯ ಸಹೋದರ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆರೋಪಿಗಳು ಆತನಿಗೆ ಥಳಿಸಿದ್ದಾರೆ ಎಂದು ಎಸ್ಪಿ ಹೇಳಿದರು, ಅವರು ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ ಬಳಿಕ ಬಾಲಕಿಯ ಸ್ಥಿತಿ ಹದಗೆಟ್ಟಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಜೆ, ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಮನೆಗೆ ಕೊಂಡೊಯ್ಯುವಾಗ, ಕುಟುಂಬ ಸದಸ್ಯರು ಅದನ್ನು ರಸ್ತೆಯ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ತುಪ್ಪ‌ ಮಾರಾಟ ಜಾಲದ ಕಿಂಗ್‌ ಪಿನ್‌ ದಂಪತಿ ಸಿಸಿಬಿ ಬಲೆಗೆ

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಾವು ವದಂತಿ: ಅಡಿಯಾಲಾ ಜೈಲಿನ ಮುಂದೆ ಹೈಡ್ರಾಮಾ

ಈ ವಿಚಾರಕ್ಕೆ ರಾಹುಲ್, ಸೋನಿಯಾ ಭೇಟಿಯಾಗಬೇಕೆಂದ ಮಲ್ಲಿಕಾರ್ಜುನ ಖರ್ಗೆ

ದೆಹಲಿ ಸ್ಪೋಟ, ಇಂದು ಬಂಧಿಯಾಗಿರುವ ಆರೋಪಿಯ ಕೈವಾಡ ಕೇಳಿದ್ರೆ ಶಾಕ್ ಆಗುತ್ತೆ

ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಬಿಗ್‌ ರಿಲೀಫ್‌, ತೀರ್ಪು ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ