Webdunia - Bharat's app for daily news and videos

Install App

ರಾಹುಲ್ ಗಾಂಧಿ ಬಲಹೀನತೆಯೇ ಇದು!

Webdunia
ಮಂಗಳವಾರ, 6 ಮಾರ್ಚ್ 2018 (08:38 IST)
ನವದೆಹಲಿ: ರಾಜಕೀಯಕ್ಕಿಳಿದ ಮೇಲೆ ಸದಾ ರಾಜಕಾರಣಿಯಾಗಿಯೇ ಇರಬೇಕು. ಒಂದು ದೊಡ್ಡ ಪಕ್ಷದ ಚುಕ್ಕಾಣಿ ಹಿಡಿದ ಮೇಲೆ ತನ್ನ ಪಕ್ಷಕ್ಕೆ ತಂದೆ ಸಮಾನನಾಗಿರಬೇಕು.

ಕುಟುಂಬದ ಯಜಮಾನನೆಸಿಕೊಂಡವನು ಸಂಕಷ್ಟದ ಬಂದಾಗ ಜತೆಗಿಲ್ಲದೇ ಹೋದರೆ ಆ ಕುಟುಂಬದ ಪರಿಸ್ಥಿತಿ ಹೇಗಾಗುತ್ತದೆ? ಅದೇ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ಆಗುತ್ತಿರುವುದು.

ಮೇಘಾಲಯ, ಗೋವಾದಲ್ಲಿ ಅಧಿಕಾರ ಹಿಡಿಯಲು ಎಲ್ಲಾ ಅವಕಾಶಗಳಿದ್ದಾಗಲೂ ಪಕ್ಷದ ಯಜಮಾನ ಎನಿಸಿಕೊಂಡ ರಾಹುಲ್ ಗಾಂಧಿ ತಲೆಯೇ ಕೆಡಿಸಿಕೊಳ್ಳಲಿಲ್ಲ. ಅವರು ತಮ್ಮ ನಿಷ್ಠಾವಂತ ನಾಯಕರಿಗೆ ಹೊಣೆ ಒಪ್ಪಿಸಿ ತಾವು ತಮ್ಮ ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾದರು. ಇದು ಒಬ್ಬ ರಾಷ್ಟ್ರೀಯ ಪಕ್ಷದ ಅದರಲ್ಲೂ ನೂರಾರು ವರ್ಷದ ಇತಿಹಾಸವಿರುವ ಪಕ್ಷವೊಂದರ ನಾಯಕನ ಲಕ್ಷಣವಲ್ಲ.

ಪಕ್ಷ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭದಲ್ಲಿ, ಸಂಕಷ್ಟದ ಪರಿಸ್ಥಿತಿಯಲ್ಲಿ ರಾಹುಲ್ ತಾವೇ ಖುದ್ದಾಗಿ ನಿಂತು ಸಮಸ್ಯೆ ಬಗೆಹರಿಸುವುದಿಲ್ಲ. ಇದೇ ಕಾರಣಕ್ಕೆ ಅವರ ಮೇಲೆ ಕೆಲವು ಪಕ್ಕಾ ಕಾಂಗ್ರೆಸಿಗರಿಗೆ ಅಸಮಾಧಾನವಿದೆ. ವಿರೋಧಿಗಳಿಗೆ ಇದೇ ಟೀಕೆಗೆ ಅಸ್ತ್ರವಾಗಿದೆ. ಅವರನ್ನು ಗಂಭೀರ ರಾಜಕಾರಣಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವಿರೋಧಿಗಳು ಟೀಕಿಸುವುದೂ ಇದೇ ಕಾರಣಕ್ಕೆ. ಇದೇ ರೀತಿ ಮುಂದುವರಿದರೆ ಒಂದು ಕಾಲದಲ್ಲಿ ಇಡೀ ಭಾರತವನ್ನು ಆವರಿಸಿಕೊಂಡಿದ್ದ ಪಕ್ಷ ಮುಂದೊಂದು ದಿನ ಯಾವ ರಾಜ್ಯದಲ್ಲೂ ಅಧಿಕಾರವಿಲ್ಲದೇ ಹಪ ಹಪಿಸಬೇಕಾದೀತು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments