Select Your Language

Notifications

webdunia
webdunia
webdunia
webdunia

ದೇಶದ ಪ್ರಪ್ರಥಮ ಎಸಿ ಬಸ್ ನಿಲ್ದಾಣವಿದು!

ದೇಶದ ಪ್ರಪ್ರಥಮ ಎಸಿ ಬಸ್ ನಿಲ್ದಾಣವಿದು!
NewDelhi , ಶುಕ್ರವಾರ, 19 ಮೇ 2017 (06:55 IST)
ನವದೆಹಲಿ: ಬಿರು ಬೇಸಿಗೆಯಲ್ಲಿ ಹೊರಗಡೆ ಐದು ನಿಮಿಷ ಕಳೆಯುವುದೂ ಅಸಹನೀಯ. ಅದರಲ್ಲೂ ದೆಹಲಿ ತಾಪಮಾನ ಹೇಳತೀರದು. ಇದಕ್ಕಾಗಿ ಇಲ್ಲೊಂದು ಉಪಾಯ ಕಂಡುಕೊಂಡಿದ್ದಾರೆ.

 
ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕೂರುವುದು ಕಷ್ಟವೆಂದು ಇಲ್ಲೊಂದು ಹವಾನಿಯಂತ್ರಿತ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಎಸಿ ಬಸ್ ಗೊತ್ತು. ಇದೇನಪ್ಪಾ ಎಸಿ ಬಸ್ ಸ್ಟ್ಯಾಂಡ್ ಎನ್ನಬಹುದು. ಆದರೆ ದೆಹಲಿಯ ಲಾಜ್ ಪತ್ ನಗರದಲ್ಲಿ ಈ ಸ್ಪೆಷಲ್ ಬಸ್ ನಿಲ್ದಾಣ ತಲೆ ಎತ್ತಿದೆ.

ಜಪಾನ್ ನ ಸಂಸ್ಥೆಯೊಂದು ಈ ಎಸಿ ಬಸ್ ನಿಲ್ದಾಣ ಸ್ಥಾಪಿಸಿದೆ. ಸದ್ಯಕ್ಕೆ ದೆಹಲಿಯ ತಾಪಮಾನ 40 ಡಿಗ್ರಿಗಿಂತ ಮೇಲಕ್ಕೇರಿದೆ. ಹೀಗಿರುವಾಗ ಹೊರಗಡೆ ಉರಿ ಬಿಸಿಲಿಗೆ ಮೈಯೊಡ್ಡುತ್ತಾ ಬಸ್ ಗೆ ಕಾಯುವುದು ಸುಲಭವಲ್ಲ. ಅದಕ್ಕಾಗಿ ಇಂತಹದ್ದೊಂದು ಅನುಕೂಲ ಮಾಡಿಕೊಡಲಾಗಿದೆ. ಅಂದ ಹಾಗೆ ಇಂತಹದ್ದೊಂದು ಪ್ರಯತ್ನ ದೇಶದಲ್ಲೇ ಮೊದಲು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ತಲಾಖ್ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್