Select Your Language

Notifications

webdunia
webdunia
webdunia
webdunia

ಬೆರಗಾಗಿಸುತ್ತೆ ದೀಪಾವಳಿಗೂ ಮುನ್ನ ಈ ಕಂಪನಿ ನೀಡುತ್ತಿರುವ ʼಬೋನಸ್ʼ

ಬೆರಗಾಗಿಸುತ್ತೆ ದೀಪಾವಳಿಗೂ ಮುನ್ನ ಈ ಕಂಪನಿ ನೀಡುತ್ತಿರುವ ʼಬೋನಸ್ʼ
ನವದೆಹಲಿ , ಗುರುವಾರ, 26 ಆಗಸ್ಟ್ 2021 (10:46 IST)
ಕೌಶಲಭರಿತ ಉದ್ಯೋಗಿಗಳನ್ನು ಉಳಿಸಿಕೊಂಡು ಕಂಪನಿಯ ಬೆಳವಣಿಗೆ ಗತಿಯನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದ ಯಾವುದೇ ಮಾಲೀಕರು ಕೂಡ ಲಾಭದಲ್ಲಿ ಕೆಲವು ಅಂಶವನ್ನು ಸಿಬ್ಬಂದಿಗೆ ಹಂಚುವುದನ್ನು ತಪ್ಪಿಸಲ್ಲ.

ಆದರೆ ಬಿಎಂಡಬ್ಲ್ಯು ಬೈಕ್, 1 ಲಕ್ಷ ರೂ.ವರೆಗೆ ನಗದು ಬಹುಮಾನವನ್ನು ಉತ್ತಮ ಕೆಲಸ ಮಾಡಿದವರಿಗೆ ನೀಡುವ ಕಂಪನಿಗಳು ಮಾತ್ರ ತೀರ ಅಪರೂಪ. ಬಿಜ್2ಕ್ರೆಡಿಟ್ ಕಂಪನಿಯು ಇಂಥ ಅಪರೂಪದಲ್ಲಿ ಅಪರೂಪ ಕಂಪನಿಯಂತೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ 2021-22ನೇ ಸಾಲಿನಲ್ಲಿ ಉತ್ತಮ ಕೆಲಸದ ಮೂಲಕ ಕಂಪನಿಗೆ ಒಳ್ಳೆಯ ವ್ಯವಹಾರ ಮಾಡಲು ನೆರವಾದ ಉದ್ಯೋಗಿಗಳನ್ನು ಈ ಕಂಪನಿ ಗುರುತಿಸಿದೆ.
ಅವರ ಹೊಸ ಎಚ್ಆರ್ ನೀತಿಗಳ ಪ್ರಕಾರ ಶೇ.20ರಷ್ಟು ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಭತ್ಯೆಯ 40 ಪಟ್ಟು ಬೋನಸ್ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ವಿದೇಶಿ ಬೈಕ್ ಗಳನ್ನು ಕೂಡ ನೀಡುವುದಾಗಿ ಘೋಷಿಸಲಾಗಿದೆ. ಅಲ್ಲದೇ, ದೀಪಾವಳಿಯ ಉಡುಗೊರೆಗಳನ್ನು ಕೂಡ ಈಗಲೇ ಘೋಷಿಸಲಾಗಿದ್ದು, ಎಲ್ಲ ನೌಕರರಿಗೆ ಆಯಪಲ್ ಐವಾಚ್, ಸೈಕ್ಲಿಂಗ್ ಪ್ಯಾಕೇಜ್, ಚಿನ್ನದ ನಾಣ್ಯಗಳ ನಡುವೆ ಆಯ್ಕೆ ನೀಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಚಿವಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದ ಮುಖ್ಯಮಂತ್ರಿ ಬೊಮ್ಮಾಯಿ