Select Your Language

Notifications

webdunia
webdunia
webdunia
webdunia

ಪರಸ್ಪರ ವಿವಾಹವಾಗಲು ಬಯಸಿದ ಸಹೋದರ-ಸಹೋದರಿ

ಪರಸ್ಪರ ವಿವಾಹವಾಗಲು ಬಯಸಿದ ಸಹೋದರ-ಸಹೋದರಿ
ರೂರ್ಕೆ , ಶನಿವಾರ, 1 ಅಕ್ಟೋಬರ್ 2016 (16:01 IST)
ಸಹೋದರ ಮತ್ತು ಸಹೋದರಿ ಯಾವ ರೀತಿ ಪರಸ್ಪರ ಪ್ರೀತಿಸುತ್ತಿದ್ದರೆಂದರೆ ಸಮಾಜವನ್ನೇ ಧಿಕ್ಕರಿಸಿ ವಿವಾಹವಾಗಲು ಹೊರಟಿದ್ದಾರೆ. ಕುಟುಂಬದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಪೊಲೀಸ್ ಸಹಾಯ ಯಾಚಿಸಿದ ವಿಚಿತ್ರ ಘಟನೆ ವರದಿಯಾಗಿದೆ.
 
ಕುಟುಂಬದ ಸದಸ್ಯರು ಸಹೋದರ ಮತ್ತು ಸಹೋದರಿಯನ್ನು ಕರೆಸಿ ಪೊಲೀಸ್ ಠಾಣೆಯಲ್ಲಿ ಬುದ್ದಿವಾದ ಹೇಳಲು ಪ್ರಯತ್ನಿಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಇಬ್ಬರು ವಯಸ್ಕರಾಗಿರುವುದರಿಂದ ಅವರ ವಿವಾಹವನ್ನು ತಡೆಯಲು ಕಾನೂನಿಗೂ ಸಾಧ್ಯವಿಲ್ಲ ಎಂದು ಪೊಲೀಸರು ಕೂಡಾ ಅಸಹಾಯಕರಾಗಿದ್ದಾರೆ.
 
ಹರಿದ್ವಾರದ ರೂರ್ಕೆ ಬಳಿಯಿರುವ ಗ್ರಾಮದ ನಿವಾಸಿಯಾಗಿರುವ ಯುವಕ ನೆರೆಯ ಗ್ರಾಮದಲ್ಲಿದ್ದ ತನ್ನ ಚಿಕ್ಕಮ್ಮನ ಮಗಳನ್ನು ಪ್ರೀತಿಸಲು ಆರಂಭಿಸಿದ್ದಾನೆ. ನಂತರ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಇಬ್ಬರು ಒಂದೇ ಕುಟುಂಬದವರಾಗಿದ್ದರಿಂದ ಯಾರಿಗೂ ಅನುಮಾನ ಕಾಡಿರಲಿಲ್ಲ ಎನ್ನಲಾಗಿದೆ. 
 
ಸಮಾಜ ಮತ್ತು ಕುಟುಂಬ ನಮ್ಮ ಸಂಬಂಧವನ್ನು ಒಪ್ಪುವುದಿಲ್ಲ ಎಂದು ತಿಳಿದಿದ್ದ ಇಬ್ಬರು ಪೊಲೀಸ್ ಠಾಣೆಗೆ ಕೆರಳಿ ಸಹಾಯ ಯಾಚಿಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರು ಸಹೋದರ, ಸಹೋದರಿ ಎಂದು ತಿಳಿದ ಪೊಲೀಸರು ಇಬ್ಬರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ವಿಫಲವಾಗಿದ್ದಾರೆ.
 
ಕುಟುಂಬದ ಸದಸ್ಯರು ಕೂಡಾ ಇಬ್ಬರ ಮನವೊಲಿಸಲು ಪ್ರಯತ್ನಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ಮುಂದೆ ಆವರಿಗು ನಮಗೂ ಯಾವುದೇ ಸಂಬಂಧವಿಲ್ಲ ಎಂದು ಪೋಷಕರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿಯಲ್ಲಿ ಕೇವಲ ಬೆಚ್ಚಗಿನ ನೀರು ಮಾತ್ರ ಸೇವಿಸುವ ಪ್ರಧಾನಿ ಮೋದಿ