Select Your Language

Notifications

webdunia
webdunia
webdunia
webdunia

ಅಕ್ಟೋಬರ್ ನಲ್ಲಿ ಮೂರನೇ ಅಲೆ ಅತ್ಯಧಿಕ, ಮಕ್ಕಳಿಗೆ ಅಪಾಯ: ತಜ್ಞರ ವರದಿ

coronavirus
bengaluru , ಸೋಮವಾರ, 23 ಆಗಸ್ಟ್ 2021 (14:33 IST)
ಕೊರೊನಾ ಮೂರನೇ ಅಲೆ ಅಕ್ಟೋಬರ್ ವೇ ಳೆಗೆ ಗರಿಷ್ಠ ಪ್ರಮಾಣ ತಲುಪಲಿದ್ದು, ಮಕ್ಕಳನ್ನು ಹೆಚ್ಚಾಗಿ ಕಾಡಲಿದೆ ಎಂದು ತಜ್ಞರು ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಎಚ್ಚರಿಸಿದ್ದಾರೆ.
ಕೇಂದ್ರ ಸರಕಾರ ನಿಯೋಜಿಸಿದ್ದ ಸಮಿತಿ ಮಂಗಳವಾರ ಈ ವರದಿ ನೀಡಿದ್ದು, ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಅದರಲ್ಲೂ ಮಕ್ಕಳಿಗೆ ತುರ್ತಾಗಿ ಚಿಕಿತ್ಸೆ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದೆ.
ವೈದ್ಯಕೀಯ ಕ್ಷೇತ್ರದ ತಜ್ಞರನ್ನೊಳಗೊಂಡ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ಸಂಸ್ಥೆ (ಎನ್ ಐಡಿಎಂ) ಸಮಿತಿ ಇದಾಗಿದ್ದು, ಭಾರೀ ಸಂಖ್ಯೆಯಲ್ಲಿ ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ವೈದ್ಯರು, ನರ್ಸ್, ವೆಂಟಿಲೇಟರ್, ಆಂಬುಲೆನ್ಸ್ ಸೇರಿದಂತೆ ಎಲ್ಲಾ ಮಾದರಿಯ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ವರದಿಯಲ್ಲಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಚಿಪ್ಸ್ ಪೊಟ್ಟಣದಲ್ಲಿ 'ಉಬ್ಬಿದ ಚಿಪ್' ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ