Daily Horoscope

Select Your Language

Notifications

webdunia
webdunia
webdunia
webdunia

ಪಠ್ಯಕ್ರಮಗಳನ್ನು ಇಳಿಕೆ ಮಾಡುವ ಬಗ್ಗೆ ಚಿಂತನೆ; ಶಿಕ್ಷಕರ ಸಲಹೆ ಕೇಳಿದ ಸರ್ಕಾರ

ನವದೆಹಲಿ
Normal 0 false false false EN-US X-NONE X-NONE

ನವದೆಹಲಿ : ಆಗಸ್ಟ್ ನಂತರ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರ ಮಾಡಿದ ಕೇಂದ್ರ ಸರ್ಕಾರ ಇದೀಗ 1 ವರ್ಷದ ಅವಧಿಗೆ 3 ತಿಂಗಳ ಪಠ್ಯಕ್ರಮಗಳನ್ನು ಇಳಿಕೆ ಮಾಡುವ ಚಿಂತನೆ ನಡೆಸಿದ್ದು, ಈ ಬಗ್ಗೆ ಶಿಕ್ಷಕರು ಸಲಹೆ ನೀಡುವಂತೆ ಮನವಿ ಮಾಡಿದೆ.

 

ಕೊರೊನಾ  ಭೀತಿ ಹಿನ್ನಲೆಯಲ್ಲಿ  2020-2021 ರ ಶೈಕ್ಷಣಿಕ ವರ್ಷವನ್ನು ಆಗಸ್ಟ್ ಬಳಿಕ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ  ಪಠ್ಯ ಕ್ರಮಗಳು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಪೋಷಕರು ಶಾಲಾ ಸಮಯವನ್ನು ಹಾಗೂ ಪಠ್ಯ ಕ್ರಮಗಳನ್ನು ಇಳಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
 

ಈ ಮನವಿಗೆ ಸ್ಪಂದಿಸಿದ ಸಚಿವ ರಮೇಶ್ ಪೋಖ್ರಿಯಾಲ್  , ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಫೇಸ್ ಬುಕ್ ಹಾಗೂ ಟ್ವೀಟರ್ ಖಾತೆಗೆ ಟ್ಯಾಗ್ ಅಥವಾ ಕಮೆಂಟ್ ಮೂಲಕ ಪಠ್ಯ ಕ್ರಮ ಇಳಿಕೆ ಮಾಡುವ ಬಗ್ಗೆ ಸಲಹೆ, ಅಭಿಪ್ರಾಯ ನೀಡುವಂತೆ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಗೆ ಮನವಿ ಮಾಡಿದ್ದಾರೆ.   

 

 


Share this Story:

Follow Webdunia kannada

ಮುಂದಿನ ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ದೆಹಲಿ ಸಿಎಂ ಕೊರೊನಾ ವರದಿಯಲ್ಲಿ ಏನಿದೆ ಗೊತ್ತಾ?