Webdunia - Bharat's app for daily news and videos

Install App

ಮದುವೆಯಾದ ಎರಡನೇ ದಿನಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವತಿ, ಬೆಚ್ಚಿಬಿದ್ದ ವರನ ಕುಟುಂಬ

sampriya
ಗುರುವಾರ, 30 ಮೇ 2024 (15:43 IST)
ಮಧ್ಯಪ್ರದೇಶ: ಮದುವೆಯಾದ ಎರಡೇ ದಿನಕ್ಕೆ ಯುವತಿಯೊಬ್ಬಳು  ಹೆಣ್ಣು ಮಗುವಿಗೆ ಜನ್ಮ ನೀಡಿದ ಧಮ್ನೋಡ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ನಂತರ ವರನ ಕುಟುಂಬ ಶಾಕ್‌ ಆಗಿದೆ.

ಧಮನೋಡ್ ಪೋಲೀಸರ ಪ್ರಕಾರ, ಯುವತಿ ಮೇ 20 ರಂದು ಮದುವೆಯಾಗಿದ್ದು, ಕೇವಲ ಎರಡು ದಿನಗಳ ಬಳಿಕ, ಮೇ 22 ರ ಮುಂಜಾನೆ ಯುವತಿ ಹೊಟ್ಟೆ ನೋವಿನಿಂದ ಬಳಲಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ತುಂಬು ಗರ್ಭಿಣಿ ಎಂದು ವೈದ್ಯರು ಹೇಳಿದ್ದಾರೆ.

ಯುವತಿಯನ್ನು ಬಾಯಿ ಬಿಡಿಸಿದಾಗ ತಿಂಗಳುಗಟ್ಟಲೆ ಮುಚ್ಚಿಟ್ಟಿದ್ದ ಅತ್ಯಾಚಾರ ಮತ್ತು ವಂಚನೆ ಬಗ್ಗೆ ಬಾಯಿ ಬಿಟ್ಟಿದ್ದಾಳೆ.

ಎರಡು ವರ್ಷಗಳ ಹಿಂದೆ ಸಿಮ್ರಾಲಿ ಗ್ರಾಮದ ಮದುವೆಯೊಂದರಲ್ಲಿ ಸುನೀಲ್‌ನನ್ನು ಭೇಟಿಯಾಗಿದ್ದ ಆಕೆ ಮದುವೆಯ ಭರವಸೆ ನೀಡಿ ನಿರಂತರ ಅತ್ಯಾಚಾರ ಎಸಗಿದ್ದಾನೆ. ಆದರೆ ಬೆದರಿಕೆ ಮತ್ತು ಸಾಮಾಜಿಕ ಕಳಂಕಕ್ಕೆ ಹೆದರಿ ಯುವತಿ ಈ ಘಟನೆಯನ್ನು ತನ್ನ ಕುಟುಂಬದಿಂದ ಗೌಪ್ಯವಾಗಿಟ್ಟಿದ್ದಳು.

ಸುನೀಲ್‌ಗೆ ಪದೇ ಪದೇ ಈ ವಿಚಾರ ತಿಳಿಸಿದರು ಆತ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಅದಲ್ಲದೆ ಆತನಿಗೆ ಮದುವೆಯಾಗಿರುವುದಾಗಿ ಹೇಳಿದ್ದಾನೆ. ಇದೀಗ ಸುನೀಲ್ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕೊಬ್ಬರಿ ಬೆಲೆ ಇಳಿಕೆ, ಕಾಳುಮೆಣಸು, ಕೊಬ್ಬರಿ ಎಷ್ಟಾಗಿದೆ ನೋಡಿ

ಆಷಾಢ ಶುಕ್ರವಾರ ಮನೆಗೆ ಹೊಸ ಅತಿಥಿ ಬರಮಾಡಿಕೊಂಡ ತೇಜಸ್ವಿ ಸೂರ್ಯ ದಂಪತಿ: ವಿಡಿಯೋ

ಸ್ಯಾನಿಟರಿ ಪ್ಯಾಡ್ ನಲ್ಲೂ ರಾಹುಲ್ ಗಾಂಧಿ ಫೋಟೋ: ಟ್ರೋಲ್ ಆದ ಕಾಂಗ್ರೆಸ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಅಹ್ಮದಾಬಾದ್ ವಿಮಾನ ಪತನ: ಸಂತ್ರಸ್ತರಿಗೆ ಹಣ ನೀಡಲು ಏರ್ ಇಂಡಿಯಾ ಕಳ್ಳಾಟವಾಡುತ್ತಿದೆಯೇ

ಮುಂದಿನ ಸುದ್ದಿ
Show comments