ಮಧ್ಯಪ್ರದೇಶದಲ್ಲಿ ಬಿಜೆಪಿ ಇದುವರೆಗೆ ಗೆದ್ದಿದ್ದು 40 ಸ್ಥಾನಗಳಲ್ಲಿ ಕಾಂಗ್ರೆಸ್ 7 ಸ್ಥಾನ ಮತ್ತು ಇತರರು 1 ಸ್ಥಾನಗಳಲ್ಲಿ ಬಿಜೆಪಿ ಉಳಿದ 127 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದರೆ ಕಾಂಗ್ರೆಸ್ 55 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಇಲ್ಲಿ ಬಿಜೆಪಿಯೇ ಬಹುಮತ ಪಡೆಯುವುದು ಖಚಿತವಾಗಿದೆ.
ಬಿಜೆಪಿಯ ಸಂದೀಪ್ ಶ್ರೀಪ್ರಸಾದ್ ಲೀಡಿಂಗ್
ಬಿಜೆಪಿಯ ಪ್ರಣಯ್ ಪ್ರಭಾತ್ ಪಾಂಡೆ ಮುನ್ನಡೆ
ಬಿಜೆಪಿಯ ಅಜಯ್ ವಿಷ್ಣೋಯ್ ಮುನ್ನಡೆ
ನೀರಜ್ ಸಿಂಗ್ ಲೋಧಿ (ಬಿಜೆಪಿ) ಮುನ್ನಡೆ
ಕಾಂಗ್ರೆಸ್ ನ ಲಖನ್ ಗಂಘೋರಿಯಾ ಮುನ್ನಡೆ
ಬಿಜೆಪಿಯ ಅಭಿಲಾಷ್ ಪಾಂಡೆ ಮುನ್ನಡೆ
ಮೂರು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ: ಇಂದು ಪ್ರಧಾನಿ ಮೋದಿ ನವದೆಹಲಿಯ ಬಿಜೆಪಿ ಮುಖ್ಯಕಚೇರಿಯಲ್ಲಿ ಭಾಷಣ
161 ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಪಡೆದಿರುವ ಬಿಜೆಪಿ ಮರಳಿ ಅಧಿಕಾರದತ್ತ. ಕಾರ್ಯಕರ್ತರಲ್ಲಿ ಆಗಲೇ ಸಂಭ್ರಮ ಶುರು
ಕಾಂಗ್ರೆಸ್ ನಾಯಕ ಕಮಲ್ ನಾಥ್ ಗೆ ಮತ್ತೆ ಮುನ್ನಡೆ. ಹಿನ್ನಡೆಯಲ್ಲಿದ್ದ ಮಾಜಿ ಸಿಎಂ ಈಗ ಮತ್ತೆ ಮುನ್ನಡೆಯಲ್ಲಿದ್ದಾರೆ.
ಮೂರು ರಾಜ್ಯದಲ್ಲಿ ಮುನ್ನಡೆ, ಬಿಜೆಪಿ ಮ್ಯಾಜಿಕ್ ಎಂದು ಸಂಭ್ರಮಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಮಧ‍್ಯಪ್ರದೇಶದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರಿಸುವ ಲಕ್ಷಣ ತೋರುತ್ತಿದೆ. ಸದ್ಯಕ್ಕೆ 140 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.
ಮಧ‍್ಯಪ್ರದೇಶಕ್ಕೆ ಕಮಲವೇ ಫಿಕ್ಸ್
ಮಧ್ಯಪ್ರದೇಶದಲ್ಲಿ ಬಿಜೆಪಿ ಆರಂಭದಿಂದ ಹೊಂದಿರುವ ಮುನ್ನಡೆಯನ್ನು ಈಗಲೂ ಕಾಯ್ದುಕೊಂಡು ಬಂದಿದೆ. ಒಟ್ಟು 150 ಸ್ಥಾನಗಳಲ್ಲಿ ಮುನ್ನಡೆ ಹೊಂದಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಲಕ್ಷಣ ತೋರುತ್ತಿದೆ.
ಮಧ‍್ಯಪ್ರದೇಶದಲ್ಲಿ ಬಿಜೆಪಿ 145, ಕಾಂಗ್ರೆಸ್ 84
ಮಧ‍್ಯಪ್ರದೇಶದಲ್ಲಿ ಬಿಜೆಪಿ ನಾಗಲೋಟ ಮುಂದುವರಿದಿದೆ. ಬಿಜೆಪಿ 145 ರಲ್ಲಿ ಮುನ್ನಡೆಯಲ್ಲಿದ್ದು, ಸ್ಪಷ್ಟ ಬಹುಮತದ ಭರವಸೆ ಮೂಡಿದೆ. ಕಾಂಗ್ರೆಸ್ 84 ಕ್ಷೇತ್ರದಲ್ಲಿ ಮುನ್ನಡೆಹೊಂದಿದೆ.
ಸಿಎಂ ಶಿವರಾಜ್ ಸಿಂಗ್ ಗೆ ಮುನ್ನಡೆ
ಬುಧ್ನಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಬಿಜೆಪಿ ನಾಯಕ, ಸಿಂ ಶಿವರಾಜ್ ಸಿಂಗ್ ಚೌಹಾಣ್ ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಈಗ ಒಟ್ಟು 135 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಮಧ‍್ಯಪ್ರದೇದಲ್ಲಿ ಮಾಜಿ ಸಿಎಂ ಕಮಲನಾಥ್ ಗೆ ಹಿನ್ನಡೆ
ಮಧ್ಯಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಕಮಲನಾಥ್ ತಮ್ಮ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.
ಮಧ‍್ಯಪ್ರದೇಶದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ
ನಿರೀಕ್ಷೆಯಂತೇ ಮಧ‍್ಯಪ್ರದೇಶದಲ್ಲಿ ಕಮಲ ಅರಳುವ ನಿರೀಕ್ಷೆಯಿದೆ. ಬಿಜೆಪಿ ಒಟ್ಟು 138 ಕ್ಷೇತ್ರದಲ್ಲಿ ಮುನ್ನಡೆ ಹೊಂದಿದ್ದು ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಇಲ್ಲಿ ಕಾಂಗ್ರೆಸ್ 88 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೂ ಬಿಜೆಪಿಯಿಂದ ಸಾಕಷ್ಟು ಹಿನ್ನಡೆಯಲ್ಲಿದೆ.
ಮಧ‍್ಯಪ್ರದೇಶದಲ್ಲಿ ಮುಂದುವರಿದ ಬಿಜೆಪಿ ಮುನ್ನಡೆ
ಮಧ‍್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಓಟ ಮುಂದುವರಿದಿದೆ. ಒಟ್ಟು 120 ಸ್ಥಾನಗಳಲ್ಲಿ ಬಿಜೆಪಿ 107 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇಲ್ಲಿ ಆರಂಭದಿಂದಲೂ ಬಿಜೆಪಿ ಮುನ್ನಡೆಯಲ್ಲಿತ್ತು.
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಏಣಿಕೆ ಆರಂಭವಾಗಿದ್ದು, ಬಿಜೆಪಿ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆ,ಸ್ ಪಕ್ಷ 92 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿಯಿದೆ. ಈ ಬಾರಿ ಇಲ್ಲಿ ಬಿಜೆಪಿ ಅಧಿಕಾರಕ್ಕೇರಬಹುದು ಎಂಬ ಮತಸಮೀಕ್ಷೆಗಳು ಹೇಳಿದ್ದವು.
ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಏಣಿಕೆ ಆರಂಭವಾಗಿದ್ದು, ಬಿಜೆಪಿ 66 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆ,ಸ್ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಬಿಗ್ ಫೈಟ್ ನಡೆಯುತ್ತಿದ್ದು, ಎರಡೂ ಪಕ್ಷಗಳು ತೀವ್ರ ಪೈಪೋಟಿಯಲ್ಲಿವೆ. ಇನ್ನೂ ಮತಏಣಿಕೆ ಆರಂಭಿಕ ಹಂತದಲ್ಲಿರುವುದರಿಂದ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಸರಕಾರ ಕಳೆದ 18 ವರ್ಷಗಳಿಂದ ಅಧಿಕಾರದಲ್ಲಿದ್ದು, ಕಾಂಗ್ರೆಸ್ ಪಕ್ಷ ಈ ಬಾರಿ ತನ್ನ ಅದೃಷ್ಟ ಪರೀಕ್ಷೆಯನ್ನು ಪಣಕೊಡ್ಡಿದೆ. ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಪಕ್ಷದ ಪರವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡು ಅನೇಕ ರ್ಯಾಲಿಗಳಲ್ಲಿ ಪಾಲ್ಗೊಂಡು ಮತದಾರರ ಓಲೈಕೆ ಮಾಡಿದ್ದಾರೆ.
ಮತದಾರರು ಯಾವ ಪಕ್ಷಕ್ಕೆ ಮಣೆ ಹಾಕಿದ್ದಾರೆ ಎನ್ನುವುದು ಇಂದಿನ ಮತಏಣಿಕೆಯಲ್ಲಿ ಬಹಿರಂಗವಾಗಲಿದೆ. ಹಲವಾರು ಚುನಾವಣೆ ಸಮೀಕ್ಷೆಗಳ ಸತ್ಯಾಸತ್ಯತೆಗೆ ಇಂದು ತೆರೆಬೀಳಲಿದೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಮಧ್ಯಪ್ರದೇಶ ಚುನಾವಣೆ ಫಲಿತಾಂಶಕ್ಕಾಗಿ ಇಲ್ಲಿ ವೀಕ್ಷಿಸಿ
ಮಧ್ಯಪ್ರದೇಶ ಚುನಾವಣೆ ಗ್ರಾಫ್‌ಗಾಗಿ ಇಲ್ಲಿ ನೋಡಿ
ಮಧ್ಯಪ್ರದೇಶದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ