Select Your Language

Notifications

webdunia
webdunia
webdunia
webdunia

ಪ್ರೀತಿ ನಿರಾಕರಿಸಿದ್ದಕ್ಕಾಗಿ ನಡುರಸ್ತೆಯಲ್ಲಿಯೇ ಯುವತಿಯನ್ನು ಥಳಿಸಿದ ಭಗ್ನಪ್ರೇಮಿ

ಪ್ರೀತಿ ನಿರಾಕರಿಸಿದ್ದಕ್ಕಾಗಿ ನಡುರಸ್ತೆಯಲ್ಲಿಯೇ ಯುವತಿಯನ್ನು ಥಳಿಸಿದ ಭಗ್ನಪ್ರೇಮಿ
ಫಿಲಿಬಿಟ್(ಉತ್ತರಪ್ರದೇಶ) , ಶುಕ್ರವಾರ, 16 ಜೂನ್ 2017 (18:16 IST)
ಪ್ರೀತಿ ನಿರಾಕರಿಸಿದ್ದಕ್ಕಾಗಿ ಭಗ್ನಪ್ರೇಮಿಯೊಬ್ಬ ನಡುರಸ್ತೆಯಲ್ಲಿಯೇ ಯುವತಿಯನ್ನು ಥಳಿಸಿದ ಹೇಯ ಘಟನೆ ವರದಿಯಾಗಿದೆ.
 
ಕಾಲೇಜಿಗೆ ತೆರಳುತ್ತಿದ್ದ ಯವತಿಯನ್ನು ಹಿಂಬಾಲಿಸಿ ಬಂದ ಭಗ್ನಪ್ರೇಮಿ ತನ್ನೊಂದಿಗೆ ದ್ವಿಚಕ್ರವಾಹನದಲ್ಲಿ ಬರುವಂತೆ ಹೇಳಿದ್ದಾನೆ. ಆದರೆ, ಯುವತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಆತ ಕಪಾಳಮೋಕ್ಷ ಮಾಡಿದ್ದಾನೆ.
 
ಯುವತಿಯ ಗೆಳತಿಯರು ಪಕ್ಕದಲ್ಲಿಯೇ ಇದ್ದರೂ ಯುವಕನ ಕೋಪದ ಮುಂದೆ ಹತಾಷರಾಗಿದ್ದರು. ನಂತರ ಬಂದ ಒಬ್ಬ ಗೆಳತಿ ಯುವತಿಯನ್ನು ಕಾಲೇಜಿನೊಳಗೆ ಕರೆದುಕೊಂಡು ಹೋಗುವಲ್ಲಿ ಧೈರ್ಯ ತೋರಿದ್ದಾಳೆ. 
 
ಘಟನೆಯ ಬಗ್ಗೆ ಸಿಸಿಟಿವಿಯಲ್ಲಿ ದೃಶ್ಯಾವಳಿಗಳು ದಾಖಲಾಗಿದ್ದು, ಆರೋಪಿಯನ್ನು ಶೀಘ್ರದಲ್ಲಿಯ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಅನಿಲ ಭಾಗ್ಯ ಯೋಜನೆಗೆ ಸರಕಾರ ಅಸ್ತು: ಸಚಿವ ಖಾದರ್