Select Your Language

Notifications

webdunia
webdunia
webdunia
webdunia

ಉಫ್! 17 ಪ್ರಿಯತಮೆಯರು ಮುಂದೆ ಒಮ್ಮೆಲೆ ಮುಂದೆ ನಿಂತಾಗ

ಉಫ್! 17 ಪ್ರಿಯತಮೆಯರು ಮುಂದೆ ಒಮ್ಮೆಲೆ ಮುಂದೆ ನಿಂತಾಗ
ಬೀಜಿಂಗ್ , ಶುಕ್ರವಾರ, 10 ಏಪ್ರಿಲ್ 2015 (11:50 IST)
ಅಪಘಾತವೊಂದರಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಬರುವಂತೆ ಆತನ ಸಂಬಂಧಿಕರಿಗೆ ಕರೆ ಮಾಡಿದಾಗ ಬರೊಬ್ಬರಿ 17 ಜನ ಯುವತಿಯರು ಬಂದು ಆತನನ್ನು ಮಲಗಿಸಿದ್ದ ಬೆಡ್ ಸುತ್ತ ಬಂದು ನಿಂತೇ ಬಿಟ್ಟರು. ಇದನ್ನು ನೋಡಿ ದಂಗಾಗುವ ಸರದಿ ಆಸ್ಪತ್ರೆಯ ಸಿಬ್ಬಂದಿ ಮತ್ತು ಆತನ ಪೋಷಕರದಾದರೆ, ಈ ಅಪಘಾತ ತನ್ನ ಕಳ್ಳಾಟವನ್ನು ಬಯಲಿಗೆ ತರಲಿದೆ ಎಂಬುದನ್ನು ಕನಸು ಮನಸಲ್ಲೂ  ಯೋಚಿಸಿರದ ಯುವಕ 'ಯುಆನ್' ಮಾತ್ರ ದಂಗಾಗಿ ಹೋಗಿದ್ದ.

ಈ 17 ಜನರಲ್ಲಿ ಒಬ್ಬರಿಗೂ ಆತ ತಮ್ಮನ್ನು ಬಿಟ್ಟು ಬೇರೆ ಹುಡುಗಿಯ ಜತೆ ಅಫೇರ್ ಹೊಂದಿರುವುದು ಗೊತ್ತಿರಲಿಲ್ಲವಂತೆ. ಕೆಲ ತಿಂಗಳುಗಳಿಂದ ಪ್ರೇಮ ಸಂಬಂಧ ಹೊಂದಿದವರು ಜತೆಗೆ 9 ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದವರು ಸಹ ಆ ಗುಂಪಿನಲ್ಲಿದ್ದರು. ಅದರಲ್ಲಿ ಒಬ್ಬಾಕೆಯಂತೂ ಆತನಿಂದ ಜನಿಸಿದ ಮಗುವನ್ನು ಎತ್ತಿಕೊಂಡೇ ಬಂದಿದ್ದಳು. 
 
ತಮ್ಮ ಪ್ರೇಮಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದಾನೆ ಎಂಬ ಅನುಕಂಪದಿಂದ ಬಂದಿದ್ದವರೀಗ ಆತ ಮಾಡಿದ ತಪ್ಪಿಗೆ ಇದಕ್ಕಿಂತ ಹೆಚ್ಚು ಶಿಕ್ಷೆಯಾಗಬೇಕಿತ್ತು ಎನ್ನುವಂತಾಗಿದೆ. ಅವರೆಲ್ಲರೂ ಈಗ ಒಂದಾಗಿ ಸೇರಿ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಒಂದು ಗ್ರೂಪ್ ಮಾಡಿಕೊಂಡು ಆತನಿಂದ ಯಾವ ಯಾವ ರೀತಿಯಲ್ಲಿ ಅನ್ಯಾಯವಾಗಿದೆ ಎಂಬ ಬಗ್ಗೆ ಚರ್ಚಿಸುತ್ತಿದ್ದಾರಂತೆ.
 
ಸಾಮಾಜಿಕ ಜಾಲತಾಣದಲ್ಲಿ ಈ ವಿಲಕ್ಷಣ ಕಥೆ ವೈರಲ್ ಆಗಿ ಹರಿದಾಡುತ್ತಿದೆ. ಕೆಲವರು ಆತನ ಕೃತ್ಯಕ್ಕೆ ತೀವೃ ಆಕ್ರೋಶ ವ್ಯಕ್ತ ಪಡಿಸಿದರೆ ಪಡ್ಡೆ ಹುಡುಗರು ಆತ ಒಂದೇ ಸಲ 17  ಲವ್ವರ್ಸ್‌ಗಳನ್ನು ಸಂಭಾಳಿಸಿದ್ದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾರೆ. 

Share this Story:

Follow Webdunia kannada