Select Your Language

Notifications

webdunia
webdunia
webdunia
webdunia

ಅಯೋಧ್ಯೆಯ ರಾಮಮಂದಿರದ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧಿಸಿದ ದೇವಾಲಯ ಟ್ರಸ್ಟ್‌

Ayodya

Sampriya

ಅಯೋಧ್ಯೆ , ಭಾನುವಾರ, 26 ಮೇ 2024 (15:16 IST)
photo Courtesy X
ಅಯೋಧ್ಯೆ: ಜನವರಿಯಲ್ಲಿ ಪ್ರತಿಷ್ಠಾಪನೆಗೊಂಡ ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಮೊಬೈಲ್‌ ಬಳಕೆಯನ್ನು ನಿಷೇಧಿಸಿದ ದೇವಾಲಯದ ಟ್ರಸ್ಟ್ ಆದೇಶ ನೀಡಿದೆ.

ಎಲ್ಲಾ ಭಕ್ತರು ಈ ನಿರ್ಧಾರವನ್ನು ಗೌರವಿಸಬೇಕು, ಮೊಬೈಲ್‌ ಫೋನ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಇಡಲು ಲಾಕರ್‌ ರೂಮ್‌ ಸೌಲಭ್ಯವಿದೆ. ಅದನ್ನು ಎಲ್ಲಾ ಭಕ್ತರು ಬಳಸಿಕೊಂಡು, ದೇವಾಲಯದಲ್ಲಿ ಸುವ್ಯವಸ್ಥೆ ಕಾಪಾಡಬೇಕು' ಎಂದು ದೇವಾಲಯದ ಟ್ರಸ್ಟಿ ಅನಿಲ್‌ ಮಿಶ್ರಾ ಮನವಿ ಮಾಡಿದ್ದಾರೆ.

ದೇವಾಲಯಕ್ಕೆ ಬರುವ ಭಕ್ತರು, ಜನಸಾಮಾನ್ಯರು ಮಾತ್ರವಲ್ಲದೆ ಗಣ್ಯ ವ್ಯಕ್ತಿಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಅವರೂ ದೇವಾಲಯದ ಆವರಣದಲ್ಲಿ ಮೊಬೈಲ್‌ ಫೋನ್‌ ಬಳಸುವಂತಿಲ್ಲ.

ಈ ನಿಯಮ ಶನಿವಾರ (ಮೇ 25)ದಿಂದಲೇ ಅನ್ವಯವಾಗಲಿದೆ ಎಂದು ಟ್ರಸ್ಟ್‌ ಹೇಳಿದೆ. ಜನವರಿಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಭದ್ರತೆಯ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಎರಡು ವರ್ಷಗಳಲ್ಲಿ ನಕ್ಸಲ್‌ ಮುಕ್ತ ದೇಶವಾಗುತ್ತದೆ: ಅಮಿತ್‌ ಶಾ