ಮೋದಿ ಸರ್ಕಾರ ಮಂಡಿಸಿದ ಬಜೆಟ್ ವಜಾಗೊಳಿಸುವಂತೆ ಸುಪ್ರೀಂಗೆ ದೂರು

Webdunia
ಶನಿವಾರ, 2 ಫೆಬ್ರವರಿ 2019 (10:09 IST)
ನವದೆಹಲಿ : ಶುಕ್ರವಾರ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್ ಅಸಂವಿಧಾನಿಕವಾಗಿದೆ ಎಂದು ನ್ಯಾಯವಾದಿಯೊಬ್ಬರು ಸುಪ್ರೀಂಗೆ ದೂರು ಸಲ್ಲಿಸಿದ್ದಾರೆ.


ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ  ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ.


ಆದರೆ ನ್ಯಾಯವಾದಿ ಮನೋಹರ ಲಾಲ್ ಶರ್ಮಾ ಎಂಬುವವರು ಬಜೆಟ್ ಮಂಡನೆ ಮುಗಿದ ಕೆಲವೇ ಗಂಟೆಗಳಲ್ಲಿ ಮಧ್ಯಂತರ ಬಜೆಟ್ ವಿರೋಧಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.


‘ಸಂವಿಧಾನದಲ್ಲಿ ಪೂರ್ಣಪ್ರಮಾಣದ ಬಜೆಟ್ ಮಂಡನೆಗೆ ಮಾತ್ರ ಅವಕಾಶವಿದ್ದು, ಇದಕ್ಕೆ ಧ್ವನಿಮತದ ಒಪ್ಪಿಗೆ ಪಡೆಯಬೇಕು. ಚುನಾವಣೆ ನಂತರ ಬಂದ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲು ಅವಕಾಶವಿದೆ.  ಆದರೆ ಹಣಕಾಸು ಸಚಿವ ಪಿಯೂಷ್ ಗೋಯಲ್ ಅವರ ಮಧ್ಯಂತರ ಬಜೆಟ್ ಮಂಡನೆ ಅಸಂವಿಧಾನಿಕವಾಗಿದ್ದು ಅದನ್ನು ವಜಾಗೊಳಿಸಬೇಕು. ಈಗ ಸೀಮಿತ ಅವಧಿಯ ಸರ್ಕಾರವಿದ್ದು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ’ ಎಂದು ದೂರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಜಿ ಪ್ರಧಾನಿ ಎಚ್ ದೇವೇಗೌಡರ ಆರೋಗ್ಯದ ಬಗ್ಗೆ ಕುಮಾರಸ್ವಾಮಿಯಿಂದ ಬಿಗ್‌ ಅಪ್ಡೇಟ್‌

17 ಮಕ್ಕಳು ಸಾವು ಪ್ರಕರಣ: ಕೆಮ್ಮಿನ ಮೂರು ಸಿರಪ್ ತಯಾರಿಕೆಗೆ ಬ್ರೇಕ್‌

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆ ಶಿವಕುಮಾರ್

ಶೂ ಎಸೆದ ಪ್ರಕರಣ: ನನ್ನ ಸಹೋದರನಿಗೆ ತುಂಬಾನೇ ನೋವಾಗಿದೆ ಎಂದ ಸಿಜೆಐ

ಮೈಸೂರು ರೇಪ್ ಆಂಡ್ ಮರ್ಡರ್ ಕೇಸ್‌: ಆರೋಪಿಯ ಗುರುತು ಕೊನೆಗೂ ಪತ್ತೆ

ಮುಂದಿನ ಸುದ್ದಿ
Show comments