ಡೆಹ್ರಾಡೂನ್ : ಉತ್ತರಾಖಂಡದ ಜಗತ್ಪ್ರಸಿದ್ಧ ಕೇದಾರನಾಥ ದೇವಾಲಯದ ಗರ್ಭಗುಡಿಯೊಳಗಿನ ಗೋಡೆಗೆ ಚಿನ್ನದ ಲೇಪನ ಮಾಡುವುದಕ್ಕೆ ಕೆಲ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಗೋಡೆಯ ನಾಲ್ಕೂ ಬದಿಗಳಲ್ಲಿ ಬೆಳ್ಳಿಯ ತಟ್ಟೆಗಳಿಂದ ಮುಚ್ಚಲಾಗಿದೆ. ಇದೀಗ ಚಿನ್ನದ ಲೇಪವನ್ನು ಅಳವಡಿಸಲು ಈ ಬೆಳ್ಳಿಯ ತಟ್ಟೆಗಳನ್ನು ತೆಗೆಯಬೇಕಾಗುತ್ತದೆ.
ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.