ಒಂಭತ್ತು ವರ್ಷದ ಬಾಲಕ ಈಗ ಯೋಗ ಶಿಕ್ಷಕ

Webdunia
ಭಾನುವಾರ, 20 ಫೆಬ್ರವರಿ 2022 (12:27 IST)
ಒಂಬತ್ತು ವರ್ಷದ ಭಾರತೀಯ ಹುಡುಗನೋರ್ವ ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.

ಗಿನ್ನೆಸ್ ವಿಶ್ವ ದಾಖಲೆಯ ಪುಟದಲ್ಲಿ ಈ ಬಾಲಕನ ಹೆಸರು ಸೇರಿಸಲಾಗಿದೆ. ಒಂಬತ್ತು ವರ್ಷದ ಭಾರತೀಯ ಬಾಲಕನೊಬ್ಬ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿಡಿಯೋವನ್ನು ಇತ್ತೀಚೆಗೆ ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾಗಿದೆ.

ಅತ್ಯಂತ ಕಿರಿಯ ಪ್ರಮಾಣೀಕೃತ ಯೋಗ ತರಬೇತುದಾರನಾದ ಒಂಬತ್ತು ವರ್ಷದ ಭಾರತೀಯ ಬಾಲಕ ರೇಯಾಶ್ ಸುರಾನಿ ಅವರ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ. ಮಕ್ಕಳಿಗಾಗಿ ಮೀಸಲಾಗಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊವು ಎಲ್ಲರನ್ನು ಬೆರಗುಗೊಳಿಸುತ್ತಿದೆ.

ಈ ವಿಡಿಯೋದಲ್ಲಿ ಬಾಲಕ ರೇಯಾಶ್ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಕಿರಿಯ ಪ್ರಮಾಣೀಕೃತ ಯೋಗ ಬೋಧಕನಾಗುವ ತನ್ನ ಸಾಧನೆಗಳ ಬಗ್ಗೆ ಆತ ಈ ವಿಡಿಯೋದಲ್ಲಿ ಮಾತನಾಡಿದ್ದಾನೆ. ಯೋಗವು ಯಾವಾಗಲೂ ತನಗೆ ಆಸಕ್ತಿಕರ ವಿಚಾರವಾಗಿತ್ತು. ಮತ್ತು ಈಗ ಸ್ವತಃ ನಾನೇ ಬೇರೆಯವರಿಗೆ ಕಲಿಸಲು ಪ್ರಾರಂಭಿಸಿದ್ದು ಈ ಬೋಧನೆಯನ್ನು ಕೂಡ ತಾನು ಇಷ್ಟಪಡುತ್ತಿರುವುದಾಗಿ ಬಾಲಕ ಹೇಳಿದರು.

ಯುವ ಯೋಗಪಟು ತಮ್ಮ 200 ಗಂಟೆಗಳ ಯೋಗ ಶಿಕ್ಷಕರ ತರಬೇತಿ ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ 2021ರ ಜುಲೈ  27 ರಂದು ಆನಂದ್ ಶೇಖರ್ ಯೋಗ ಶಾಲೆಯಿಂದ ಅವರಿಗೆ ಪ್ರಮಾಣಪತ್ರ ನೀಡಲಾಯಿತು ಎಂದು ಗಿನ್ನೆಸ್ ಬುಕ್ ಅಪ್ ವರ್ಲ್ಡ್ ರೆಕಾರ್ಡ್ಗೆ ಸಂಬಂಧಿಸಿದ ಅಧಿಕೃತ ಬ್ಲಾಗ್ ವರದಿ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಂತಹ ದುಃಖವಾಗಿದೆ: ಭೈರಪ್ಪ ನಿಧನಕ್ಕೆ ಭಗವಾನ್‌ ಸಂತಾಪ

ಮೇರು ಸಾಹಿತಿ ಭೈರಪ್ಪ ನಿಧನ: ಅಂತಿಮ ದರ್ಶನ, ಅಂತ್ಯಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ಪ್ರಾಜೆಕ್ಟ್‌ ಚೀತಾ: ಈ ದೇಶದಿಂದ ವರ್ಷದ ಅಂತ್ಯದೊಳಗೆ ಬರಲಿದೆ ಚೀತಾಗಳು

ಫೇಲ್ ಮಾಡುವುದಾಗಿ ಬೆದರಿಸಿ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಸ್ವಾಮೀಜಿ ಚೈತನ್ಯಾನಂದ ವಿರುದ್ಧ ದೂರು

ಅತ್ಯುತ್ತಮ ಕಾರ್ಯಕ್ಷಮತೆಯಡಿಯಲ್ಲಿ ರೈಲ್ವೆ ನೌಕರರಿಗೆ ದಸರಾ, ದೀಪಾವಳಿ ಬಂಪರ್‌ ಕೊಡುಗೆ

ಮುಂದಿನ ಸುದ್ದಿ
Show comments