Select Your Language

Notifications

webdunia
webdunia
webdunia
webdunia

ನ್ಯಾಯಮೂರ್ತಿಗಳಾಗಿ 12 ಜನರ ಹೆಸರು ಅಂತಿಮಗೊಳಿಸದ ಕೇಂದ್ರ

ನ್ಯಾಯಮೂರ್ತಿಗಳಾಗಿ 12 ಜನರ ಹೆಸರು ಅಂತಿಮಗೊಳಿಸದ ಕೇಂದ್ರ
ನವದೆಹಲಿ , ಭಾನುವಾರ, 17 ಅಕ್ಟೋಬರ್ 2021 (17:01 IST)
ನವದೆಹಲಿ : ನಾಲ್ಕು ಹೈಕೋರ್ಟ್ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹಿಂದೆ ಶಿಫಾರಸು ಮಾಡಿದ್ದ 12 ಹೆಸರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಉನ್ನತ ಮೂಲಗಳು ಇದನ್ನು ದೃಢಪಡಿಸಿವೆ.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂಬ ಶಿಫಾರಸು ಕುರಿತ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಭಿನ್ನ ಸಂದರ್ಭಗಳಲ್ಲಿ ಕೊಲಿಜಿಯಂಗೆ ಈ ಶಿಫಾರಸುನ್ನು ವಾಪಸು ಕಳುಹಿಸಿದೆ.
ಇದರಲ್ಲಿ ಕಲ್ಕತ್ತ ಹೈಕೋರ್ಟ್ಗೆ ನೇಮಿಸಲು ಶಿಫಾರಸು ಮಾಡಿದ್ದ ಐವರ ಹೆಸರುಗಳು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ಗೆ ಶಿಫಾರಸು ಮಾಡಿದ್ದ ಮೂವರು ಹಾಗೂ ಕರ್ನಾಟಕ, ಅಲಹಾಬಾದ್ ಹೈಕೋರ್ಟ್ಗಳಿಗೆ ನೇಮಿಸಲು ಶಿಫಾರಸು ಮಾಡಿದ್ದ ತಲಾ ಇಬ್ಬರು ಹೆಸರುಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಡೆಂಘೆ