Select Your Language

Notifications

webdunia
webdunia
webdunia
webdunia

ಮತ್ತೊಂದು ಗಂಡಾಂತರದಿಂದ ಪಾರಾದ ಮಹಾರಾಷ್ಟ್ರ ಸಿಎಂ

ದೇವೇಂದ್ರ ಫಢ್ನವೀಸ್
ಮುಂಬೈ , ಶುಕ್ರವಾರ, 7 ಜುಲೈ 2017 (16:04 IST)
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಅಲಿಬಾಗ್‌ನಿಂದ ಮರಳುತ್ತಿರುವಾಗ ಹೆಲಿಕಾಪ್ಟರ್ ದುರಂತ ನಡೆದು ಮತ್ತೊಂದು ಗಂಡಾಂತರದಿಂದ ಪಾರಾದ ಘಟನೆ ವರದಿಯಾಗಿದೆ.
 
ಸಿಎಂ ಫಡ್ನವೀಸ್ ಹೆಲಿಕಾಪ್ಟರ್ ಹತ್ತುವ ಮುನ್ನವೇ ಅಕಸ್ಮಿಕವಾಗಿ ಹೆಲಿಕಾಪ್ಟರ್ ಸ್ಟಾರ್ಟ್ ಆಗಿದ್ದರಿಂದ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಸಿಎಂ ಫಡ್ನವೀಸ್ ಅವರನ್ನು, ನಂತರ ಸುರಕ್ಷಿತವಾಗಿ ಮುಂಬೈಗೆ ಕಳುಹಿಸಲಾಯಿತು ಎಂದು ಮೂಲಗಳು ತಿಳಿಸಿವೆ.
 
ಕೆಲ ತಿಂಗಳುಗಳ ಹಿಂದೆ ಸಿಎಂ ದೇವೇಂದ್ರ ಫಡ್ನವೀಸ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಆತಂಕ ಮೂಡಿಸಿತ್ತು. ಆದರೆ, ಅಂದೂ ಕೂಡಾ ಸಿಎಂ ಫಡ್ನವೀಸ್ ಪ್ರಾಣಾಪಾಯದಿಂದ ಪಾರಾಗಿರುವುದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾ ವಿಷಯದಲ್ಲಿ ಪ್ರಧಾನಿ ಮೋದಿ ಮೌನವೇಕೆ?: ರಾಹುಲ್ ಗಾಂಧಿ ಕಿಡಿ