ಬಿಎಸ್‌ವೈಗೆ ಬರೆದ ಪತ್ರದಲ್ಲಿ ಗೋವಾ ಹಿತಾಸಕ್ತಿ ಕಡೆಗಣಿಸಿ– ಪರಿಕ್ಕರ್

ಗುರುವಾರ, 28 ಡಿಸೆಂಬರ್ 2017 (20:23 IST)
ಮಹಾದಾಯಿ ವಿಚಾರವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಗೋವಾ ರಾಜ್ಯದ ಹಿತಾಸಕ್ತಿ ಕಡೆಗಣನೆ ಮಾಡಿಲ್ಲ ಎಂದು ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಹೇಳಿದ್ದಾರೆ.
 
ನಾನು ಬರೆದಿರುವ ಪತ್ರ ಕಾನೂನಿನ ಚೌಕಟ್ಟಿನ ನಿಯಮಗಳನ್ನು ಮೀರಿಲ್ಲ. ರಾಜಕೀಯ ರಂಗದಲ್ಲಿ ಇರುವವರು ನಿರ್ಧಾರ ತೆಗೆದುಕೊಳ್ಳಲು ಕೆಲವು ಇತಿಮಿತಿಗಳು ಇರುತ್ತವೆ ಎಂಬುದು ನನಗೂ ತಿಳಿದಿದೆ ಎಂದಿದ್ದಾರೆ.
 
ಮಹಾದಾಯಿ ಕುರಿತು ನಾವು ಯಾವುದೇ ಒತ್ತಡಗಳಿಗೂ ಮಣಿಯುವುದಿಲ್ಲ. 2000 ಇಸ್ವಿಗಿಂತ ಮುಂಚೆ ಗೋವಾದಲ್ಲಿ ಆಡಳಿತದಲ್ಲಿ ಇದ್ದಾಗ ಕಾಂಗ್ರೆಸ್‌ ಮಹದಾಯಿ ನೀರು ಹಂಚಿಕೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಆ ಕುರಿತು ನನ್ನಲ್ಲಿ ದಾಖಲೆಗಳಿವೆ. ಅವುಗಳನ್ನು ಸದನದಲ್ಲಿ ಬಹಿರಂಗಪಡಿಸುವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಜೆಡಿಯು ಪಕ್ಷದಲ್ಲಿ ಬಂಡಾಯ– 300ಕ್ಕೂ ಅಧಿಕ ಮುಖಂಡರ ರಾಜೀನಾಮೆ