ಪತಿಯೇ ಪತ್ನಿಯನ್ನು ಅರೆನಗ್ನಗೊಳಿಸಿ ಉರೆಲ್ಲಾ ಸುತ್ತಿಸಿ ದೌರ್ಜನ್ಯ

Webdunia
ಶುಕ್ರವಾರ, 10 ನವೆಂಬರ್ 2023 (13:13 IST)
40 ವರ್ಷದ ಪತ್ನಿಯನ್ನು ಮನಬಂದಂತೆ ಥಳಿಸಿದ ಆಕೆಯ ಪತಿ, ನಂತರ ಆಕೆಯನ್ನು ಅರೆನಗ್ನಳಾಗಿಸಿ ಮಾರುಕಟ್ಟೆಯಲ್ಲೆಲ್ಲ ಮೆರವಣಿಗೆ ಮಾಡಿಸಿದ್ದಾನೆ.ಈ ಘಟನೆ ನಡೆದಾಗ ಪೀಡಿತಳ ಹದಿ ಹರೆಯದ ಮಗಳು ಸಹ ಸ್ಥಳದಲ್ಲಿದ್ದಳು. ಘಟನೆಯ ಮಾಹಿತಿ ಪಡೆದ ಸಿಕಾರ್‌ನ ಉಪವಿಭಾಗೀಯ ಮಾಜಿಸ್ಟ್ರೇಟ್  ಮತ್ತು ಗ್ರಾಮದ ತಹಶೀಲ್ದಾರ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.
 
ದೇಶದಲ್ಲಿ ನಡೆಯುತ್ತಿರುವ ಮಹಿಳಾ ಶೋಷಣೆಗೆ ಕೊನೆಯೇ ಇಲ್ಲವೆಂಬಂತೆ ಭಾಸವಾಗುತ್ತಿದೆ. ಮಹಿಳೆಯನ್ನು ನಗ್ನಳಾಗಿಸಿ ಊರೆಲ್ಲ ಮೆರವಣಿಗೆ ಮಾಡಿಸಿದರೆ? ಅದು ಕೂಡ ಆಕೆಯ ಗಂಡನೇ ಈ ಕೃತ್ಯವೆಸಗಿದರೆ.... ಹೆಣ್ಣೊಬ್ಬಳಿಗೆ ತಾನು ಬದುಕಲೇಬಾರದು ಎನ್ನುವಷ್ಟು ಅಪಮಾನ ಹುಟ್ಟಿಸಲು ಇದನ್ನು ಹೊರತು ಪಡಿಸಿ ಮತ್ಯಾವ ಸಂಗತಿ ಇರಲಿಕ್ಕೆ ಸಾಧ್ಯ? 
 
ಇದು ನಡೆದಿರುವುದು ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ. ಹೇಳಲೇ ಬೇಕಿದೆ ಶೇಮ್ ಶೇಮ್ ರಾಜಸ್ಥಾನ.... ಏನೆಂದರೇನು? ಆರೋಪಿಗಳಿಗೆ ಯಾವ ಶಿಕ್ಷೆ ನೀಡಿದರೇನು? ಆ ಕ್ಷಣಕ್ಕೆ ಆಕೆ ಅನುಭವಿಸಿದ, ಅನುಭವಿಸುವ ನೋವು, ಸಂಕಟಗಳಿಗೆ ಕೊನೆ ನೀಡಲು ಸಾಧ್ಯವೇ?
 
ತನ್ನ ಗಂಡ ಕೇಸರ್ ಸಿಂಗ್ ವಿರುದ್ಧ ಪೀಡಿತೆ ಪ್ರಕರಣ ದಾಖಲಿಸಿದ್ದು, ಆತನನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ ಪೀಡಿತೆಗೆ ಎರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿದ್ದು,  ಕುಡುಕ ಪತಿ  ಪ್ರತಿದಿನ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ. 
 
ಕಳೆದ ವಾರ  ಇದೇ ರೀತಿಯ ಘಟನೆ ನಡೆದಿತ್ತು. ಮಹಿಳೆಯೊಬ್ಬಳ ಮೇಲೆ ಕೊಲೆ ಆರೋಪ ಹೊರಿಸಿ, ಆಕೆಯ ತಲೆ ಬೋಳಿಸಿ  ಕತ್ತೆಯ ಮೇಲೆ ಮೆರವಣಿಗೆ ಮಾಡಿಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಸ್ಸಾಂನ ಗಾಯಕ ಜುಬಿನ್ ಗರ್ಗ್ ನಿಧನ: ನ್ಯಾಯಯುತ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ನನಗೇನಾದರೆ ರಾಜ್ಯ ಸರ್ಕಾರ, ಪ್ರಿಯಾಂಕ್ ಖರ್ಗೆ ಹೊಣೆ: ಛಲವಾದಿ ನಾರಾಯಣಸ್ವಾಮಿ

ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾದ ರಾಯಚೂರಿನ ಪಿಡಿಓಗೆ ಬಿಗ್ ಶಾಕ್

ಆರ್‌ಎಸ್‌ಎಸ್‌ ನಿಷೇಧದ ಹಿಂದಿನ ಉದ್ದೇಶದ ಬಗ್ಗೆ ನ್ಯಾ ಸಂತೋಷ ಹೆಗಡೆ ಸ್ಫೋಟಕ ಹೇಳಿಕೆ

ಸಚಿವೆಯಾದ ಕ್ರಿಕೆಟರ್ ರವೀಂದ್ರ ಜಡೇಜಾ ಪತ್ನಿ ಹಿನ್ನೆಲೆ ಗೊತ್ತಾ

ಮುಂದಿನ ಸುದ್ದಿ