Webdunia - Bharat's app for daily news and videos

Install App

ಹದಿಹರೆಯದ ಯುವತಿಯ ಮೇಲೆ ನಾಲ್ವರಿಂದ ಗ್ಯಾಂಗ್‌ರೇಪ್

Webdunia
ಶುಕ್ರವಾರ, 10 ನವೆಂಬರ್ 2023 (12:41 IST)
ನಾಲ್ಕು ಜನರಿದ್ದ ಕಾರಿನಲ್ಲಿ ತನ್ನ ಸ್ನೇಹಿತ ಇದ್ದುದನ್ನು ನೋಡಿದ ಆಕೆ ಅವನ ಬಳಿ ಮಾತನಾಡಲು ಕಾರ್ ಬಳಿ ಹೋಗಿದ್ದಾಳೆ. ಆಗ ಆಕೆಯನ್ನು ಕಾರ್ ಒಳಕ್ಕೆ ಎಳೆದ ಹುಡುಗರು ನಂತರ ಗ್ಯಾಂಗ್‌ರೇಪ್ ಎಸಗಿದ್ದು ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 
 
17 ವರ್ಷದ ಅಪ್ರಾಪ್ತೆಯನ್ನು  ಆಕೆಯ ಮನೆಯ ಹೊರಗಡೆಯೇ ಅಪಹರಿಸಿದ ನಾಲ್ಕು ಜನ ಯುವಕರು ಪ್ಲಾಟ್ ಒಂದಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಗುರಗಾಂವ್‌ನಲ್ಲಿ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಆಕೆಗೆ ಪರಿಚಿತ ವ್ಯಕ್ತಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 
 
 
ರವಿವಾರ ರಾತ್ರಿ ಆಕೆಯನ್ನು ಅಪಹರಿಸಿದ್ದ ಆರೋಪಿಗಳು ಸೋಮವಾರ ಬೆಳಿಗ್ಗೆ  ಆಕೆಯನ್ನು ಮರಳಿ ಕರೆ ತಂದು, ಆಕೆಯ ಮನೆಯ ಹೊರಗೆ ತಂದು ಬಿಟ್ಟು ಹೋಗಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. 8 ಗಂಟೆ ಸುಮಾರಿಗೆ ಬಾಲಕಿ  ಮಹಿಳಾ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಆಕೆಯ ಮನೆಗೆ ಬಂದು ದೂರನ್ನು ದಾಖಲಿಸಿಕೊಂಡಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಪೀಡಿತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸಾಬೀತಾಗಿದೆ.  
 
ಆರೋಪಿಗಳಲ್ಲಿ ಮೂವರನ್ನು ಬಂಧಿಸಲಾಗಿದ್ದು,ಅವರಲ್ಲೊಬ್ಬ 12 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಬಾಲಕಿಯ ಪರಿಚಯ ಹೊಂದಿದ್ದ ಆತ ಆಕೆಯ ಜತೆ ಫೋನ್ ಸಂಭಾಷಣೆ ನಡೆಸುತ್ತಿದ್ದುದು ಕಾಲ್ ರಿಕಾರ್ಡ್ಸ್‌ ಮೂಲಕ ಸಾಬೀತಾಗಿದೆ. ಇನ್ನೊಬ್ಬ ಅಪ್ರಾಪ್ತನಾಗಿದ್ದು 11 ನೇ ತರಗತಿಯಲ್ಲಿ ಓದುತ್ತಿದ್ದಾನೆ.  ಮೂರನೆಯ ಆರೋಪಿ ಹೊಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ನಾಲ್ಕನೆಯ ಆರೋಪಿ ಪರಾರಿಯಾಗಿದ್ದಾನೆ. ಅಪ್ರಾಪ್ತನನ್ನು ಹೊರತು ಪಡಿಸಿದರೆ ಉಳಿದ ಮೂವರು 19 ರಿಂದ 23 ವರ್ಷ ವಯಸ್ಸಿನವರಾಗಿದ್ದಾರೆ. 
 
ಬಾಲಕಿ ನೀಡಿರುವ ದೂರಿನ ಪ್ರಕಾರ ನಗರದ ಖಾಸಗಿ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ಆಕೆ ರಾತ್ರಿ ಸಮಯದಲ್ಲಿ  
 
ಪ್ಲಾಟ್ ಒಂದಕ್ಕೆ ಆಕೆಯನ್ನು ಎಳೆದೊಯ್ದ ಯುವಕರು ಆಕೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿದ್ದಾರೆ. ಮಾರನೆಯ ದಿನ ಬೆಳಿಗ್ಗೆ ಆಕೆಯ ಮನೆ ಬಳಿ ದೂಡಿ ಹೋಗಿದ್ದಾರೆ.  ಪರಾರಿಯಾಗಿರುವ ನಾಲ್ಕನೆಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಕೊನೆ ದಿನಾಂಕ

Karnataka Weather: ಮುಂದಿನ ತಿಂಗಳು ಈ ದಿನದಿಂದ ರಾಜ್ಯದಲ್ಲಿ ಭಾರೀ ಮಳೆ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಮುಂದಿನ ಸುದ್ದಿ
Show comments