ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಈ ಜೋಡಿ, ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆ ನಿಶ್ಚಿತಾರ್ಥ ಕೂಡಾ ನಡೆದಿತ್ತು. ಎಲ್ಲವೂ ಅಂದುಕೊಂಡ ಹಾಗೇ ನಡೆದಿದ್ದರೆ ಶನಿವಾರವೇ ಈ ಜೋಡಿ ಹಸೆಮಣೆ ಏರಬೇಕಿತ್ತು. ಆದರೆ ಇದೀಗ ಕೈಹಿಡಿಯಬೇಕಿದ್ದ ಹುಡುಗಿಯನ್ನು ಕೊಂದು ಹುಡುಗ ಜೈಲು ಸೇರುವಂತಾಗಿದೆ.
ಮದುವೆಗೆ ಇನ್ನೇನೂ ಒಂದು ಗಂಟೆಯಿರುವಾಗ ಸೀರೆ ಹಾಗೂ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದೆ.
ಕೋಪದ ಭರದಲ್ಲಿ ಸಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದಿದ್ದಾನೆ. ಬಳಿಕ ಆಕೆಯ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ.
ಆರೋಪಿಗಳು ಮನೆಯನ್ನು ಧ್ವಂಸ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಸ್ಥಳಕ್ಕೆ ಧಾವಿಸಿದೆ.
ಇನ್ನೂ ಈ ಘಟನೆಗೂ ಮುನ್ನಾ ಆರೋಪಿ ನೆರೆಹೊರೆಯವರ ಜತೆಯೂ ಜಗಳ ಮಾಡಿಕೊಂಡಿರುವುದು ತಿಳಿದುಬಂದಿದೆ. <>