ಕಾಮ ತೃಷೆಯನ್ನು ನೀಗಿಸಿಕೊಳ್ಳಲು ಮೂವರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ನೀಚ ತಂದೆ

Webdunia
ಬುಧವಾರ, 12 ಸೆಪ್ಟಂಬರ್ 2018 (06:55 IST)
ಗುಜರಾತ್ : ಕಾಮುಕರ ಕೈಯಿಂದ ತನ್ನ ಹೆಣ್ಣುಮಕ್ಕಳನ್ನು ರಕ್ಷಿಸಬೇಕಾದ ತಂದೆಯೇ ತನ್ನ ಮೂವರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯ ಗುಜರಾತಿನಲ್ಲಿ ನಡೆದಿದೆ.


ಆರೋಪಿ ತಂದೆಗೆ 40 ವರ್ಷ ವಯಸ್ಸಾಗಿದ್ದು, ಇತನಿಗೆ ಒಬ್ಬ ಮಗ ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ.  ಇತನ ಪತ್ನಿ 2008 ರಲ್ಲಿ ಮೃತಪಟ್ಟಿದ್ದಾಳೆ. ಮಕ್ಕಳು ಜುನಾಗಡ್ ನಲ್ಲಿ ವಸತಿ ಶಾಲೆಯಲ್ಲಿ ಇದ್ದು, ವ್ಯಾಸಂಗ ಮಾಡುತ್ತಿದ್ದರು. ಇತ ತನ್ನ ಕಾಮ ತೃಷೆಯನ್ನು ನೀಗಿಸಿಕೊಳ್ಳಲು ಶಾಲೆ ರಜೆ ಇದ್ದಾಗ ತನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ಅತ್ಯಾಚಾರ ಎಸಗುತ್ತಿದ್ದನು. ಇದೇ ರೀತಿ ಸತತ ಐದು ವರ್ಷಗಳಿಂದ ಈ ಹೀನ ಕೃತ್ಯವನ್ನು ಮಾಡುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಕಾರಿಯೊಬ್ಬರು ಹೇಳಿದ್ದಾರೆ.


ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಒಡ್ಡಿದ್ದಾನೆ. ಆದ್ದರಿಂದ ಐದು ವರ್ಷದಿಂದ ಈ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದರೆ ಇದೀಗ ಮೂವರು ಅಕ್ಕತಂಗಿಯರು ಸೇರಿ ನಿರ್ಧಾರ ಮಾಡಿ ಕಮ್ಲಾಬಾಗ್ ಪೊಲೀಸ್ ಠಾಣೆಗೆ ಬಂದು ಈ ಬಗ್ಗೆ  ದೂರು ನೀಡಿದ್ದಾರೆ. ಗುಜರಾತಿನ ಪೋರಬಂದರ್ ನಗರದ ಪೊಲೀಸರು ಈಗ ಆರೋಪಿ ತಂದೆಯನ್ನು ಬಂಧಿಸಿದ್ದಾರೆ.


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಲವು ಮಕ್ಕಳ ಕಣ್ಣಿಗೆ ಗಾಯ ಬೆನ್ನಲ್ಲೇ 59 ಕಾರ್ಬೈಡ್ ಗನ್ ವಶಕ್ಕೆ, ಇಬ್ಬರು ಅರೆಸ್ಟ್‌

ಕರ್ನೂಲ್ ಭೀಕರ ಬಸ್ ಬೆಂಕಿ ಅವಘಡ, ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಸಲಹೆ ಹೀಗಿದೆ

ಪೊಲೀಸ್ ಅಧಿಕಾರಿಯಿಂದ ಅತ್ಯಾಚಾರ: ಅಂಗೈಯಲ್ಲಿ ಡೆತ್‌ನೋಟ್ ಬರೆದಿಟ್ಟು ವೈದ್ಯೆ ಸೂಸೈಡ್

ನನ್ನನ್ನು ಕತ್ತಲಲ್ಲಿ ಯಾಕೆ ಹುಡುಕ್ತೀಯಾ, ನಾನು ಹಾಗಲ್ಲ: ಪ್ರದೀಪ್ ಈಶ್ವರ್

ರಾಷ್ಟ್ರ ರಾಜಧಾನಿಯಲ್ಲಿ ಗಾಳಿ ಗುಣಮಟ್ಟ ಕಳಪೆ: ದೆಹಲಿಯಲ್ಲಿ ಈ ವ್ಯಾಪಾರದಲ್ಲಿ ಭಾರೀ ಏರಿಕೆ

ಮುಂದಿನ ಸುದ್ದಿ