Webdunia - Bharat's app for daily news and videos

Install App

ತನ್ನ ಸ್ವಂತ ಕರುಳ ಕುಡಿಯನ್ನೇ ವಿಕೃತಿಯಿಂದ ಹತ್ಯೆ ಮಾಡಿದ ತಂದೆ!

Webdunia
ಗುರುವಾರ, 13 ಜುಲೈ 2023 (09:25 IST)
ಚೆನ್ನೈ : ಪಾಪಿ ತಂದೆಯೊಬ್ಬ ತನ್ನ 26 ದಿನದ ಪುಟ್ಟ ಕಂದಮ್ಮನ ಕುತ್ತಿಗೆ ಹಾಗೂ ತೋಳನ್ನು ಹರಿತವಾದ ಆಯುಧದಿಂದ ಕೊಯ್ದು ವಿಕೃತಿ ಮೆರೆದ ಘಟನೆಯೊಂದು ತಮಿಳುನಾಡಿನ ವಲ್ಲೂರಿನಲ್ಲಿ ನಡೆದಿದೆ.
 
ಆರೋಪಿಯನ್ನು ಮಣಿಕಂದನ್ (29) ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಹೇಮಾ (21) ಎಂಬಾಕೆಯ ಜೊತೆ ಸಪ್ತಪದಿ ತುಳಿದಿದ್ದಾನೆ. ದಂಪತಿಗೆ ಇತ್ತೀಚೆಗೆ ಗಂಡು ಮಗು ಹುಟ್ಟಿತ್ತು.

ತಾಂಬರಂನಲ್ಲಿ ವಾಯುಪಡೆಯ ಕ್ಯಾಂಟೀನ್ನ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮಣಿಕಂದನ್, ವೆಲ್ಲೂರಿನ ಅನೈಕಟ್ ತಾಲೂಕಿನ ದೇವಿ ನೆಲ್ಲಿಕುಳಂ ಪ್ರದೇಶದಲ್ಲಿ ವಾಸವಿದ್ದನು. ತನ್ನ ಕೆಲಸದ ಕಾರಣದಿಂದಾಗಿ ಮಣಿಕಂದನ್ ತಿಂಗಳಿಗೊಮ್ಮೆ ಪತ್ನಿಯನ್ನು ಭೇಟಿಯಾಗುತ್ತಿದ್ದನು. ಇತ್ತೀಚೆಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಪತಿ ಪತ್ನಿಯ ಮೇಲೆ ಅನುಮಾನಪಡುತ್ತಿದ್ದನು.

ಇದೇ ವಿಚಾರಕ್ಕೆ ಇಂದು ಕೂಡ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಹೇಮಾಳ ಮುಂದೆಯೇ ಮಣಿಕಂದನ್ ಚಾಕುವಿನಿಂದ ಹಸುಗೂಸಿನ ಬಲಗೈ ಮತ್ತು ಕುತ್ತಿಗೆಯನ್ನು ಕೊಯ್ದಿದ್ದಾನೆ.

ತಕ್ಷಣವೇ ಹೇಮಾ ತನ್ನ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಂತೆಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಕುತ್ತಿಗೆ ಮತ್ತು ಬಲಗೈಯಲ್ಲಿ ಗಾಯಗಳಾಗಿದ್ದು ಹೊಲಿಗೆ ಹಾಕಬೇಕಾಗುತ್ತದೆ. ಉಳಿದಂತೆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತದ ಮೇಲೆ 50 ಶೇಕಡಾ ಸುಂಕದ ಬರೆ ಹಾಕಿದ ಡೊನಾಲ್ಡ್ ಟ್ರಂಪ್

ಭುವನೇಶ್ವರ: ಸ್ನೇಹಿತನಿಂದ ಬ್ಲ್ಯಾಕ್‌ಮೇಲ್‌: ಹೆದರಿ ಪೆಟ್ರೋಲ್ ಹಚ್ಚಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಹೆಲ್ಮೆಟ್ ಇಲ್ಲದೆ, ಪೆಟ್ರೋಲ್ ಇಲ್ಲ: ಪೆಟ್ರೋಲ್ ಹಾಕಿಸಿಕೊಳ್ಳಲು ಬೈಕ್ ಸವಾರ ಮಾಡಿದ ಕಸರತ್ತು ವೈರಲ್

ವಿಕ್ಟೋರಿಯಾ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ದಿಡೀರ್ ಭೇಟಿ ಹಿಂದಿನ ಕಾರಣ ಇಲ್ಲಿದೆ

ಧರ್ಮಸ್ಥಳ: ನಿರ್ಣಾಯಕ ಘಟಕ್ಕೆ ತಲುಪುತ್ತಿರುವಾಗಲೇ ಮತ್ತೊಬ್ಬ ಅಪರಿಚಿತ ಎಂಟ್ರಿ

ಮುಂದಿನ ಸುದ್ದಿ
Show comments