ಪುತ್ರಿಯನ್ನು ಕಾಮುಕನಿಂದ ಬಚಾವ್ ಮಾಡಲು ಹೋಗಿ ಕಣ್ಣು ಕಳೆದುಕೊಂಡ ತಂದೆ

Webdunia
ಬುಧವಾರ, 22 ನವೆಂಬರ್ 2023 (12:20 IST)
ಲಕ್ಷ್ಮೀಘಾಟ್ ಎಂಬ ಹಳ್ಳಿಯ ನಿವಾಸಿಯಾಗಿರುವ 65 ವರ್ಷದ ವೃದ್ಧ ಗೇನು ಚೌಧರಿ ಬೋಟ್ ದುರಸ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ.  ತನ್ನ ಮಗಳನ್ನಾತ 15 ವರ್ಷಗಳ ಹಿಂದೆ ವಿವಾಹ ಮಾಡಿ ಕಳುಹಿಸಿದ್ದ. ಇಬ್ಬರು ಮಕ್ಕಳ ತಾಯಿಯಾಗಿರುವ ಆತನ 35 ವರ್ಷದ ಮಗಳು ಗಂಡನನ್ನು ತೊರೆದು ಇತ್ತೀಚಿಗೆ ಮರಳಿ ಬಂದು ತನ್ನ ತಂದೆ-ತಾಯಿಗಳ ಜತೆ ವಾಸಿಸತೊಡಗಿದ್ದಳು. 
 
ಅತ್ಯಾಚಾರಕ್ಕೊಳಗಾಗುತ್ತಿದ್ದ ತನ್ನ ಮಗಳನ್ನು ರಕ್ಷಿಸಲು ಹೋದ ತಂದೆ ತೀವೃ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಮಾಲ್ಡಾದಲ್ಲಿ ನಡೆದಿದೆ. ಪೀಡಿತನ ತಲೆಗೆ 15 ಹೊಲಿಗೆಗಳನ್ನು ಹಾಕಲಾಗಿದೆ. ಆತನ ಕಣ್ಣಿಗೆ ಆರೋಪಿ ಕಬ್ಬಿಣದ ರಾಡ್ ಹಾಕಿ ಚುಚ್ಚಿದ್ದಾನೆ. ಆದ್ದರಿಂದ ಆತಬಲಗಣ್ಣು ಕಳೆದುಕೊಳ್ಳುವ ಅಪಾಯ ಎದುರಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
 
 
ಆಕೆಯನ್ನು ಕಂಡಾಗೆಲ್ಲ ಪಕ್ಕದ ಮನೆಯ ನಿವಾಸಿ  ರಿಂಟು ಶೇಖ್ ಅಶ್ಲೀಲ ಕಮೆಂಟ್ ಮಾಡುತ್ತಿದ್ದ ಮತ್ತು ಅಸಭ್ಯ  ಪ್ರಸ್ತಾಪಗಳನ್ನು ಆಕೆಯ ಮುಂದಿಡುತ್ತಿದ್ದ. ಈ ರೀತಿಯ ದುರ್ವರ್ತನೆಗಳನ್ನು  ಪುನರಾವರ್ತಿಸದಂತೆ ಸ್ಥಳೀಯ ಕಾಂಗರೂ ಕೋರ್ಟ್ ಆತನಿಗೆ ಎಚ್ಚರಿಕೆ ನೀಡಿತ್ತು. 
 
ತನ್ನ ಕೆಟ್ಟ ವರ್ತನೆಯನ್ನು ನಿಲ್ಲಿಸುವ ಬದಲು ರಿಂಟು ಶೇಖ್ ಊರ ತುಂಬೆಲ್ಲ ಆಕೆಯ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಓಡಾಡಿದ. ಆದ್ದರಿಂದ ತಂದೆ- ಮಗಳು ಇಂಗ್ಲೀಷ್ ಬಾಜಾರ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದರು.
 
ಆದರೆ ಪೊಲೀಸರು ಆತನ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಿಲ್ಲ.  ಆರೋಪಿ  ರಿಂಟು ತನ್ನ ಮೇಲೆ ನೀಡಿರುವ ದೂರನ್ನು ಹಿಂಪಡೆಯುವಂತೆ ಪೀಡಿತಳ ಕುಟುಂಬದ ಮೇಲೆ ಒತ್ತಡ ಹೇರತೊಡಗಿದ.
 
ಒಂದು ದಿನ ಮಹಿಳೆಯ ಮನೆಗೆ ಹೋದ ಶೇಖ್ ಆಕೆಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ. ಆದರೆ ಅಷ್ಟರಲ್ಲಿ ಅವಳ ತಂದೆ ಬಂದು ಆತನನ್ನು ತಡೆದ. ವೃದ್ಧನ ಮೇಲೆ ದಾಳಿ ನಡೆಸಿದ ಆತ ಕಬ್ಬಿಣದ ಸರಳನ್ನು ಆತನ ಕಣ್ಣಿಗೆ ಚುಚ್ಚಿದ. ಮಹಿಳೆಯ ಕೂಗನ್ನು ಕೇಳಿಸಿಕೊಂಡ ಸ್ಥಳೀಯರು ಓಡಿ ಬಂದು ವೃದ್ಧನನ್ನು ಆಸ್ಪತ್ರೆಗೆ ಸಾಗಿಸಿದರು. 
 
ಪೀಡಿತನಿಗೆ ಚಿಕಿತ್ಸೆ ನೀಡಿರುವ ವೈದ್ಯರು ಆತ ತನ್ನ ದೃಷ್ಟಿ ಮರಳಿ ಪಡೆಯುವ ಸಾಧ್ಯತೆಗಳು ಕಡಿಮೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಕ್ಸ್ ಕೊಳೆಯಾಗಿದ್ದರೆ ಮತ್ತೆ ಮೊದಲಿನಂತಾಗಲು ಇಲ್ಲಿದೆ ಟಿಪ್ಸ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಲ್ಲಿ ಇನ್ನು ಸಿಂಗಲ್ ಆಗಿ ಕಾರಿನಲ್ಲಿ ಓಡಾಡಿದ್ರೂ ಟ್ಯಾಕ್ಸ್: ಇದೊಂದು ಬಾಕಿ ಇತ್ತು ಎಂದ ಪಬ್ಲಿಕ್

ರಾಹುಲ್ ಗಾಂಧಿಗೆ ಬೆದರಿಕೆಗೆ ಸಿದ್ದರಾಮಯ್ಯ ಗರಂ: ಆರ್ ಎಸ್ಎಸ್ ದುರುಳರು ಎಂದ ಸಿಎಂ

ಮುಂದಿನ ಸುದ್ದಿ
Show comments