Webdunia - Bharat's app for daily news and videos

Install App

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

Sampriya
ಶುಕ್ರವಾರ, 27 ಜೂನ್ 2025 (19:50 IST)
ಹರಿಯಾಣ: ತಾನೇ ಸೊಸೆಯನ್ನು ಕೊಂದು ಹೂತು ಹಾಕಿ, ನಾಪತ್ತೆಯಾಗಿದ್ದಾಳೆಂದು ದೂರು ನೀಡಿ ನಾಟಕವಾಡಿ 2 ತಿಂಗಳ ಬಳಿಕ ಆರೋಪಿ ಮಾವ ಸಿಕ್ಕಿಬಿದ್ದ ಪ್ರಕರಣ ಸಂಬಂಧ ಇದೀಗ ಬೆಚ್ಚಿಬೀಳಿಸುವ ಸಂಗತಿಯೊಂದು ಹೊರಬಿದ್ದಿದೆ. 

ಹರಿಯಾಣದ ಫರಿದಾಬಾದ್‌ನಲ್ಲಿ ದಾಖಲಾದ ಪ್ರಕರಣ ಸಂಬಂಧ ಸಂತ್ರಸ್ತೆಯ ಮೇಲೆ ಆಕೆಯ ಮಾವ ಅತ್ಯಾಚಾರ ಎಸಗಿದ್ದರು ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೊಸೆಯನ್ನು ಕೊಂದು ತಾನೇ ಮನೆ ಎದುರು ಹೂತು ಹಾಕಿ, ಸೊಸೆ ನಾಪತ್ತೆಯಾಗಿದ್ದಾಳೆ ಪೊಲೀಸರಿಗೆ ದೂರು ನೀಡಿದ 2 ತಿಂಗಳ ಬಳಿಕ ಕೊಲೆ ಪ್ರಕರಣದ ಆರೋಪಿ ಆಕೆಯ ಮಾವನನ್ನು ಪೊಲೀಸರು ಬಂಧಿಸಿದ್ದರು. 

ಇದೀಗ ತನಿಖೆ ಸಂಬಂಧ ಬಿಗ್‌ ಅಪ್ಡೇಟ್ ಹೊರಬಿದ್ದಿದೆ. ಕೊಲೆಗೂ ಮುನ್ನಾ ಆಕೆಯ ಮೇಲೆ ಮಾವ ಅತ್ಯಾಚಾರ ಎಸಗಿರುವುದಾಗಿ ಬಾಯಿಬಿಟ್ಟಿದ್ದಾನೆ. ಇನ್ನೂ ಕೊಲೆಯಲ್ಲಿ ಸಂತ್ರಸ್ತೆಯ ಅತ್ತೆಯೂ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಪೊಲೀಸರು ಇದೀಗ ಸಂತ್ರಸ್ತೆಯ ಪತಿ ಅರುಣ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಅವರು ಇನ್ನೂ ತಲೆಮರೆಸಿಕೊಂಡಿದ್ದಾರೆ.

ಪ್ರಮುಖ ಆರೋಪಿ, ಮಾವ ಭೂಪ್ ಸಿಂಗ್ ಅವರನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿತು. ವಿಚಾರಣೆ ವೇಳೆ, ಕೊಲೆ ಪೂರ್ವ ಯೋಜಿತ ಎಂದು ಆತ ಬಹಿರಂಗಪಡಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

24 ವರ್ಷದ ತನ್ನುವಿನ ಕೊಲೆಯನ್ನು ಏಪ್ರಿಲ್ 15 ರಂದು ಯೋಜಿಸಲಾಗಿತ್ತು ಮತ್ತು ಆಕೆಯ ಪತಿ ಮತ್ತು ಅತ್ತೆ ಕೂಡ ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹಿರಿಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಯ್ಲೆಟ್‌ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ

ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮುಂದಿನ ಸುದ್ದಿ
Show comments