Webdunia - Bharat's app for daily news and videos

Install App

ತಾಯಿಯ ಜೊತೆ ಮಲಗಿದ್ದವನ ಮರ್ಮಾಂಗವನ್ನೇ ಕಟ್ ಮಾಡಿದ ಮಗಳು!

Webdunia
ಬುಧವಾರ, 4 ಮೇ 2022 (09:23 IST)
ಅಮರಾವತಿ : ತಾಯಿಯ ಅಕ್ರಮ ಸಂಬಂಧದಿಂದ ಬೇಸತ್ತ ಮಗಳೊಬ್ಬಳು ಆತನಿಗೆ ತಕ್ಕ ಪಾಠ ಕಲಿಸಿದ ಘಟನೆಯೊಂದು ಆಂಧ್ರಪ್ರದೇಶದ ಬಪಟ್ಟಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.

ರಾಮಚಂದ್ರ ರೆಡ್ಡಿ ಎಂಬಾತ 2 ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲ ಮಾಡುತ್ತಿದ್ದನು. ಈ ವೇಳೆ ಮಹಿಳೆಗೆ ಈತನ ಪರಿಚಯವಾಗಿತ್ತು.

ಈ ಪರಿಚಯವು ಇಬ್ಬರ ಪ್ರೇಮಕ್ಕೆ ತಿರುಗಿತ್ತು. ಕ್ರಮೇಣ ಇಬ್ಬರೂ ಜೊತೆಗೂಡಿ ಮದ್ಯ ಸೇವಿಸುತ್ತಿದ್ದು, ಅದರ ಅಮಲಿನಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ನಡೆದಿತ್ತು. ಆದರೆ ಇತ್ತ ಮಹಿಳೆಗೆ ಈಗಾಗಲೇ ಮದುವೆಯಾಗಿದ್ದು, ಮಗಳು ಕೂಡ ಇದ್ದಾಳೆ.

ಆದರೂ ರಾಮಚಂದ್ರ ಜೊತೆ ಅಕ್ರಮ ಸಂಬಂಧವನ್ನು ಹೊಂದಿದ್ದಳು. ತಾಯಿಯ ಈ ನಡವಳಿಕೆ ಮಗಳಿಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ ತಾಯಿ-ಮಗಳ ಮಧ್ಯೆ ಇದೇ ವಿಚಾರಕ್ಕೆ ಆಗಾಗ ಜಗಳವಾಗುತಿತ್ತು.

ಒಟ್ಟಾರೆ ತಾಯಿಯ ಅಕ್ರಮ ಸಂಬಂಧವನ್ನು ನೋಡಿ ನೋಡಿ ಸಾಕಾಗಿದ್ದ ಮಗಳು ಒಮದು ಐಡಿಯಾ ಹುಡುಕಿಯೇ ಬಿಟ್ಟಳು. ಅದೇನೆಂದರೆ ರಾತ್ರಿ ಪ್ರಿಯಕರನ ಜೊತೆ ತಾಯಿ ಮಲಗಿದ್ದ ಸಂದರ್ಭದಲ್ಲಿ ಮಗಳು ತಕ್ಕ ಪಾಠ ಕಲಿಸಲು ರೆಡಿಯಾಗಿದ್ದಳು. ಅಂತೆಯೇ ಇಬ್ಬರೂ ಗಾಢ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಮಗಳು ಹರಿತವಾದ ಬ್ಲೇಡ್ ತೆಗೆದುಕೊಂದು ರೆಡ್ಡಿಯ ಮರ್ಮಾಂಗವನ್ನೇ ಕತ್ತರಿಸಿದಳು.

ಇತ್ತ ಮರ್ಮಾಂಗ ಕಳೆದುಕೊಂಡ ರೆಡ್ಡಿ ಜೋರಾಗಿ ಕಿರುಚಿಕೊಂಡಿದ್ದಾನೆ. ನಂತರ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India ‌Flight Crash: ಮೃತ ಪ್ರತಿ ಪ್ರಯಾಣಿಕನ ಕುಟುಂಬಕ್ಕೆ ತಲಾ ₹1 ಕೋಟಿ ಘೋಷಿಸಿದ ಟಾಟಾ ಗ್ರೂಪ್

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

ಮುಂದಿನ ಸುದ್ದಿ
Show comments