ಪ್ರೇಯಸಿಯ ಗಂಡನ ಶವವನ್ನು ತುಂಡರಿಸಿದ! ಮುಂದೇನಾಯ್ತು?

Webdunia
ಗುರುವಾರ, 2 ಡಿಸೆಂಬರ್ 2021 (08:37 IST)
ಹೈದರಾಬಾದ್ : ತೆಲಂಗಾಣದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಗಂಡನನ್ನು ಕೊಲೆ ಮಾಡಿ, ಆತನ ಶವವನ್ನು ತುಂಡರಿಸಿದ ಘಟನೆ ನಡೆದಿದೆ.
ಛಿದ್ರಗೊಂಡ ಮೃತದೇಹ ರಾಮಗುಂಡಂನಲ್ಲಿ ಪತ್ತೆಯಾಗಿದ್ದು, ಅದಾದ ಎರಡು ದಿನಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಯನ್ನು ತಾನೇ ಮಾಡಿದ್ದೆಂದು ಸಾಕ್ಷಿ ಸಿಗಬಾರದು ಎಂಬ ಕಾರಣಕ್ಕೆ ಆರೋಪಿ ಕೊಲೆ ಮಾಡಿದ ನಂತರ ಶವವನ್ನು ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಹಲವು ಪ್ರದೇಶಗಳಲ್ಲಿ ಎಸೆದಿದ್ದ.
ಕೊಲೆ ಮಾಡಿದ ಆರೋಪಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ರಾಮಗುಂಡಂನ ಎನ್‌ಟಿಪಿಸಿ ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿದ್ದ ರಾಜು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆ ಮಹಿಳೆಯ ಗಂಡ ಶಂಕರ್ಗೆ ಈ ವಿಷಯ ಗೊತ್ತಾಗಿದ್ದರಿಂದ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆಂಬ ಕೋಪದಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು.
ಶಂಕರ್ ಅವರ ತುಂಡರಿಸಿದ ತಲೆ, ಕೈಗಳನ್ನು ಪೊಲೀಸರು ವಶಪಡಿಸಿಕೊಂಡು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನ್ನ ಹೆಂಡತಿ ಆಕೆಯ ಸಹೋದ್ಯೋಗಿಯಾಗಿದ್ದ ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಶಂಕರ್ ಕೆಂಡಾಮಂಡಲರಾಗಿದ್ದರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವೂ ಆಗುತ್ತಿತ್ತು. ತನ್ನ ಮಗ ನಾಪತ್ತೆಯಾಗಿರುವುದರ ಹಿಂದೆ ಸೊಸೆ ಮತ್ತು ಪ್ರಿಯಕರನ ಕೈವಾಡವಿದೆ ಎಂದು ಶಂಕರ್ ಅವರ ತಾಯಿ ಆರೋಪಿಸಿದ್ದರು.
ತನ್ನ ವಿರುದ್ಧ ಕೇಸ್ ದಾಖಲಾದ ನಂತರ ರಾಜು ಬೈಕ್‌ನಲ್ಲಿ ಕರೀಂನಗರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ವಿಚಾರಣೆ ವೇಳೆ ಶಂಕರ್ನನ್ನು ಕೊಂದಿರುವುದಾಗಿ ರಾಜು ಒಪ್ಪಿಕೊಂಡಿದ್ದಾನೆ. ಶಂಕರ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ಕಿರುಕುಳದ ಕುರಿತು ರಾಜು ಜತೆ ಚರ್ಚಿಸಿ ಶಂಕರ್‌ನನ್ನು ಹತ್ಯೆ ಮಾಡಲು ನಿರ್ಧರಿಸಲಾಗಿತ್ತು.
ನವೆಂಬರ್ 25ರಂದು ರಾಜು ತಮ್ಮ ಭಿನ್ನಾಭಿಪ್ರಾಯವನ್ನು ಚರ್ಚಿಸುವ ನೆಪದಲ್ಲಿ ಶಂಕರ್ನನ್ನು ಮನೆಗೆ ಕರೆದಿದ್ದ ಎನ್ನಲಾಗಿದೆ. ಆಗ ಶಂಕರ್‌ಗೆ ಮದ್ಯ ಸೇವಿಸುವಂತೆ ಮಾಡಿ ಬಿಯರ್ ಬಾಟಲಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದರು. ನಂತರ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ, ಸೋನಿಯಾ, ಪ್ರಿಯಾಂಕಾರನ್ನು ಎಂಥವಳೋ ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ

ಸಂಕಷ್ಟಕ್ಕೆ ಕೈಜೋಡಿಸಿದ ಭಾರತಕ್ಕೆ ಶ್ರೀಲಂಕಾ ಧನ್ಯವಾದ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾದಲ್ಲಿ ಮೃತರ ಸಂಖ್ಯೆ 627ಕ್ಕೆ ಏರಿಕೆ, ಇನ್ನೂ ಹಲವು ಮಂದಿ ನಾಪತ್ತೆ

ನಾಳೆಯಿಂದ ಬೆಳಗಾವಿ ಅಧಿವೇಶನ, ಖಾಕಿ ಪಡೆ ಹೈ ಅಲರ್ಟ್‌

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments