Webdunia - Bharat's app for daily news and videos

Install App

ಕೇಂದ್ರ ಸರ್ಕಾರದಿಂದಲೇ ಜನಗಣತಿಯೊಂದಿಗೆ ಜಾತಿ ಗಣತಿ ಸಮೀಕ್ಷೆ ನಿರ್ಧಾರ: ಕಾಂಗ್ರೆಸ್‌ಗೆ ಟಾಂಗ್‌

Sampriya
ಬುಧವಾರ, 30 ಏಪ್ರಿಲ್ 2025 (17:45 IST)
Photo Courtesy X
ನವದೆಹಲಿ: ಶೀಘ್ರದಲ್ಲಿ ನಡೆಯಲಿರುವ ಜನಗಣತಿಯೊಂದಿಗೆ ಜಾತಿ ಗಣತಿ ಸಮೀಕ್ಷೆಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

ಜಾತಿ ಸಮೀಕ್ಷೆಯನ್ನು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಆರೋಪಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾತಿಗಣತಿಯನ್ನು ಜನಗಣತಿಯ ಭಾಗವಾಗಿಸುವುದಾಗಿ ಹೇಳಿದೆ. ಸದಾ ಜಾತಿಗಣತಿ ಜಪ ಮಾಡುತ್ತಿದ್ದ ಕಾಂಗ್ರೆಸ್‌ಗೆ ಈ ಮೂಲಕ ಸರ್ಕಾರ ಟಾಂಗ್‌ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ಮುಂಬರುವ ಜನಗಣತಿಯಲ್ಲಿ ಜಾತಿ ಎಣಿಕೆಯನ್ನು ಸೇರಿಸಲು ನಿರ್ಧರಿಸಿದೆ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಜನಗಣತಿ ಕಾರ್ಯ ಏಪ್ರಿಲ್ 2020 ರಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ವಿಳಂಬವಾಯಿತು. 10 ವರ್ಷಗಳ ವೇಳಾಪಟ್ಟಿಯ ಪ್ರಕಾರ ಈ ಕಾರ್ಯ ನಡೆದಿದ್ದರೆ, ವರದಿಯು 2021 ರಲ್ಲಿ ಪ್ರಕಟವಾಗುತ್ತಿತ್ತು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮದಾಬಾದ್ ವಿಮಾನ ದುರಂತ: ಆರ್ ಎಸ್ಎಸ್, ಮುಸ್ಲಿಮರು ಮಾಡುತ್ತಿರುವ ಕೆಲಸ ನೋಡಿ

ಅಹಮದಾಬಾದ್ ವಿಮಾನ ದುರಂತ ಸ್ಥಳಕ್ಕೆ ಬರುತ್ತಿರುವ ಜನರಿಂದಲೇ ತನಿಖಾಧಿಕಾರಿಗಳಿಗೆ ತಲೆನೋವು

ನಮ್ಮವರ ಮೃತದೇಹ ಕೊಡಿ.. ಅಹಮದಾಬಾದ್ ಆಸ್ಪತ್ರೆ ಮುಂದೆ ಕುಟುಂಬಸ್ಥರ ಸಾಲು

ವಿಮಾನದ ಚಕ್ರಗಳು ಎಂಥಾ ಅಪಘಾತಕ್ಕೂ ಬೇಗ ಹಾನಿಯಾಗಲ್ಲ ಯಾಕೆ

Karnataka Weather: ಈ ವಾರದ ಹವಾಮಾನ ಬದಲಾವಣೆಯನ್ನು ತಪ್ಪದೇ ಗಮನಿಸಿ

ಮುಂದಿನ ಸುದ್ದಿ
Show comments