Daily Horoscope
✕

ತಾಳಿ ಕಟ್ಟುವಷ್ಟರಲ್ಲಿ ಮದುವೆ ಬೇಡವೆಂದ ವಧು!

Webdunia
ಸೋಮವಾರ, 13 ಜೂನ್ 2022 (08:35 IST)
ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು ವರನನ್ನು ನಿರಾಕರಿಸಿದ ವಿಚಿತ್ರ ಘಟನೆ ಬುಧವಾರ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ನಡೆದಿದೆ.
 
ನಾರಾವಿ ದೇವಸ್ಥಾನದ ಸನಿಹವಿರುವ ಸಭಾಭವನದಲ್ಲಿ ನಾರಾವಿಯ ಯುವಕನಿಗೂ ಶಿರ್ತಾಡಿ ಸನಿಹದ ಮೂಡುಕೊಣಾಜೆಯ ಯುವತಿಗೂ ಮದುವೆ ನಡೆಯುವುದರಲ್ಲಿತ್ತು.

ಸುಮಾರು 500ಕ್ಕೂ ಹೆಚ್ಚು ಮಂದಿ ಸೇರಿದ್ದು, ಸಮಾರಂಭ ಅದ್ದೂರಿಯಾಗಿಯೇ ಆಗುವುದರಲ್ಲಿತ್ತು. ಆದರೆ ಹಾರ ವಿನಿಮಯ ಸಂದರ್ಭ ವಧು ಯಾವುದೋ ತಗಾದೆ ತೆಗೆದಿದ್ದಾಳೆ. ಬಳಿಕ ತಾಳಿ ಕಟ್ಟುವ ವೇಳೆ ಈ ವರ ಬೇಡ ಎಂದು ಹಾರವನ್ನು ತೆಗೆದು ಬಿಸಾಡಿದ್ದಾಳೆಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ವಧುವಿನ ಆರೋಗ್ಯ ಏರುಪೇರಾಗಿದ್ದರಿಂದ ಆಕೆ ವಿಚಿತ್ರವಾಗಿ ವರ್ತಿಸ ತೊಡಗಿದ್ದಾಳೆಂದೂ ಜನರು ಹೇಳತೊಡಗಿದ್ದಾರೆ.ಈ ವಿದ್ಯಮಾನದಿಂದ ಗಂಡಿನ ಹಾಗೂ ಹೆಣ್ಣಿನ ಕಡೆಯವರ ಮಧ್ಯೆ ಕೆಲ ಕಾಲ ವಾಗ್ಯುದ್ಧ ನಡೆದಿದೆ. ವೇಣೂರು ಪೋಲಿಸರ ಆಗಮನವಾಗಿದೆ.

ತನ್ನನ್ನು ನೋಡಲು ಬಂದವನೊಬ್ಬ, ನಿಶ್ಚಯ ಆದದ್ದು ಇನ್ನೊಬ್ಬನೊಂದಿಗೆ, ಇವತ್ತು ಬಂದ ವರ ಬೇರೊಬ್ಬ ಎಂಬ ವಿಚಿತ್ರ ಹೇಳಿಕೆಯನ್ನು ಪೋಲಿಸರ ಮುಂದೆ ವಧು ಹೇಳಿದ್ದಾಳಂತೆ. ಘಟನೆಯ ಸುದ್ದಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದ ಜನತೆ ಬಿಗ್ ಶಾಕ್: ನಂದಿನಿ ಹಾಲಿನದ ದರ 8 ರೂ ಏರಿಕೆಗೆ ಸಂಪುಟ ನಿರ್ಧಾರ

ನವಂಬರ್ 1 ರ ದೆಹಲಿ ಪ್ರತಿಭಟನೆಗೆ ಹೋಗಲು ನಮಗೆ ರೈಲು ಕೊಡ್ತಿಲ್ಲ, ಅದಕ್ಕೇ ಫ್ಲೈಟ್, ಬಸ್ ನಲ್ಲಿ ಹೋಗ್ತೀವಿ: ಬಿಕೆ ಹರಿಪ್ರಸಾದ್

ಧರ್ಮಸ್ಥಳ ಸೌಜನ್ಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ತಾಯಿ ಕುಸುಮಾವತಿ ಬಗ್ಗೆ ಸ್ಪೋಟಕ ಮಾಹಿತಿ

ಲಗೇಜ್ ಭಾರ ಜಾಸ್ತಿಯಾಯ್ತು ಎಂದು ಏರ್ ಪೋರ್ಟ್ ಸಿಬ್ಬಂದಿ ಹೇಳಿದ್ದಕ್ಕೆ ಮಹಿಳೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಶಾಕ್ Video

ಯೋಗಿ ಸರ್ಕಾರದ ಮಾಸ್ಟರ್ ಸ್ಟ್ರೋಕ್: ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ

ಮುಂದಿನ ಸುದ್ದಿ
Show comments