Publish Date: Wed, 18 Jan 2023 (17:57 IST)
Updated Date: Wed, 18 Jan 2023 (18:03 IST)
ವಿಮಾನ ದುರಂತದಲ್ಲಿ ಐವರು ಭಾರತೀಯರು ಸೇರಿದಂತೆ 72 ಮಂದಿ ಸಾವಿಗೀಡಾಗಿದ್ದಾರೆ. ಘಟನೆ ಬೆನ್ನಲ್ಲೇ ಹಲವು ಮನಕಲಕುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹೌದು, ದುರಂತಕ್ಕೀ ಡಾದ ವಿಮಾನದಲ್ಲಿ ಕೊನೆಯದಾಗಿ ಟಿಕ್ ಟಾಕ್ ವಿಡಿಯೊ ಮಾಡಿದ್ದ ಗಗನಸಖಿಯೂ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಇದೀಗ ಬೆಳಕಿಗೆ ಬಂದಿದೆ. ಪತನಗೊಂಡ ಯೇತಿ ಏರ್ ಲೈನ್ಸ್ ವಿಮಾನದಲ್ಲಿ ಗಗನಸಖಿ ಒಶಿನ್ ಅ್ಯಲೆ ಅವರ ಕೊನೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಒಶಿನ್ ಅಲೆ ಸೇರಿದಂತೆ ನಾಲ್ವರು ಕ್ಯಾಬಿನ್ ಸಿಬ್ಬಂದಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ನೇಪಾಳದಲ್ಲಿ ಒಶಿನ್ ಅಲ್ಯೆ ಜನಪ್ರಿಯ ಟಿಕ್ ಟಾಕ್ ಸ್ಟಾರ್ ಆಗಿದ್ದರು. ಕೊನೆಯದಾಗಿ ಒಶಿನ್ ಅಲ್ಯೆ ಹಂಚಿಕೊಂಡಿರುವ ವಿಡಿಯೊದಲ್ಲಿ ನಗುನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿರುವ ದೃಶ್ಯ ಸೆರೆಯಾಗಿದೆ. ಒಶಿನ್ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.