Select Your Language

Notifications

webdunia
webdunia
webdunia
webdunia

ಆಗಸ್ಟ್ 15 ರಂದು ಪ್ರಧಾನಿ ಮೋದಿ ಹತ್ಯೆಗೆ ಉಗ್ರರ ಸಂಚು ಬಹಿರಂಗ

ಆಗಸ್ಟ್ 15 ರಂದು ಪ್ರಧಾನಿ ಮೋದಿ ಹತ್ಯೆಗೆ ಉಗ್ರರ ಸಂಚು ಬಹಿರಂಗ
ನವದೆಹಲಿ , ಗುರುವಾರ, 28 ಜುಲೈ 2016 (15:33 IST)
ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ರಹಸ್ಯ ಮಾಹಿತಿಯನ್ನು ರವಾನಿಸಿವೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಸ್ಟ್ 15 ರಂದು ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭದಲ್ಲಿ ದ್ರೋಣ್ ಮೂಲಕ ದಾಳಿ ನಡೆಸಲು ಲಷ್ಕರ್-ಎ-ತೊಯಿಬಾ ಮತ್ತು ಜೈಷ್-ಎ-ಮೊಹಮ್ಮದ್ ಸಂಘಟನೆಗಳು ಜಂಟಿಯಾಗಿ ಸಂಚು ರೂಪಿಸಿವೆ ಎಂದು ಗುಪ್ತಚರ ಮೂಲಗಳು ಆಘಾತಕಾರಿ ಸುದ್ದಿಯನ್ನು ಬಹಿರಂಗಪಡಿಸಿವೆ.
 
ಪಾಕಿಸ್ತಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಎರಡು ಉಗ್ರಗಾಮಿ ಸಂಘಟನೆಗಳು ಪ್ರಧಾನಿ ಮೋದಿ ಮೇಲೆ ದಾಳಿ ಮಾಡುವ ಹೊಣೆಯನ್ನು ಹೊತ್ತುಕೊಂಡಿವೆ ಎನ್ನಲಾಗಿದೆ. 
 
ಭಾರತ ಮತ್ತು ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರರ ಟೆಲಿಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿದ ಗುಪ್ತಚರ ಸಂಸ್ಥೆಗಳು ಪ್ರಧಾನಮಂತ್ರಿ ಭದ್ರತಾ ಸಭೆಯಲ್ಲಿ ಮಾಹಿತಿ ಬಹಿರಂಗಪಡಿಸಿವೆ.
 
ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ದೇಶದ ಅನೇಕ ಕಡೆಗಳಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಎಸ್‌ಪಿಜಿ ವಿಭಾಗ ಪ್ರಧಾನಿ ಮೋದಿಗೆ ಮತ್ತಷ್ಟು ಭದ್ರತೆಯನ್ನು ಒದಗಿಸಲು ಚಿಂತನೆ ನಡೆಸಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಹೌದು, ಕಾಶ್ಮಿರದಲ್ಲಿ ಹಿಂಸಾಚಾರಕ್ಕೆ ನಾನೇ ಕಾರಣ: ಹಫೀಜ್ ಸಯೀದ್