Select Your Language

Notifications

webdunia
webdunia
webdunia
webdunia

ಕಾಶ್ಮೀರದಲ್ಲಿ ಪೊಲೀಸ್ ವಾಹನದ ಮೇಲೆ ಉಗ್ರರ ದಾಳಿ: 6 ಮಂದಿ ಪೊಲೀಸರ ಹತ್ಯೆ

ಕಾಶ್ಮೀರದಲ್ಲಿ ಪೊಲೀಸ್ ವಾಹನದ ಮೇಲೆ ಉಗ್ರರ ದಾಳಿ: 6 ಮಂದಿ ಪೊಲೀಸರ ಹತ್ಯೆ
ಶ್ರೀನಗರ , ಶನಿವಾರ, 17 ಜೂನ್ 2017 (07:22 IST)
ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 6 ಮಂದಿ ಪೊಲೀಸರು ಹತ್ಯೆಗೀಡಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದೆ.

ನಿನ್ನೆ ಸಂಜೆ ಠಾಣಾಧಿಕಾರಿ, ಸಬ್ ಇನ್ಸ್`ಪೆಕ್ಟರ್ ಮತ್ತು 4 ಮಂದಿ ಪೇದೆಗಳು ಟಾಟಾ ಸುಮೋದಲ್ಲಿ ಅನಂತ್ ನಾಗ್`ನತ್ತ ತೆರಳುತ್ತಿದ್ದಾಗ ದಾಳಿ ನಡೆಸಿರುವ ನಾಲ್ಕೈದು ಮಂದಿ ಉಗ್ರರು ಗುಂಡಿನ ಮಳೆಗರೆದಿದ್ದಾರೆ. ಘಟನೆಯಲ್ಲಿ 6 ಮಂದಿ ಪೊಲೀಸರೂ ಅಸುನೀಗಿದ್ದಾರೆ.

ಲಷ್ಕರ್ ಇ ತೊಯಿಬಾ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಅರ್ವಾನಿ ಎನ್`ಕೌಂಟರ್`ನಲ್ಲಿ ಲಷ್ಕರ್ ಕಮಾಂಡರನ್ನ ಕೊಂದಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಪೊಲೀಸರ ಮೇಲೆ ದಾಳಿ ನಡೆದ ಸ್ಥಳವನ್ನ ಸೇನೆ ಸುತ್ತುವರೆದು ಕಾರ್ಯಾಚರಣೆ ನಡೆಸಿದೆಯಾದರೂ ಉಗ್ರರು ಎಸ್ಕೇಪ್ ಆಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಪ್ಪು ಹಣ: ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಸ್ವಿಸ್ ಸಮ್ಮತಿ