Publish Date: Fri, 18 Nov 2022 (15:06 IST)
Updated Date: Fri, 18 Nov 2022 (15:07 IST)
ನವದೆಹಲಿ : ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯುವವರೆಗೂ ಭಾರತ ವಿಶ್ರಮಿಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ʼನೋ ಮನಿ ಫಾರ್ ಟೆರರಿಸಂʼ ಭಯೋತ್ಪಾದನೆ ನಿಗ್ರಹ ಹಣಕಾಸು ಕುರಿತು ಸಚಿವರ ಸಮಾವೇಶ ಮೋದಿ ಅವರು ಇಂದು ಮಾತನಾಡಿದರು.
ನಮ್ಮ ನಾಗರಿಕರು ಸುರಕ್ಷಿತವಾಗಿರಲು ನಾವು ಬಯಸಿದರೆ, ನಮ್ಮ ಮನೆಗಳಿಗೆ ಭಯೋತ್ಪಾದನೆ ಬರುವವರೆಗೆ ಕಾಯಲು ಸಾಧ್ಯವಿಲ್ಲ. ನಾವು ಭಯೋತ್ಪಾದಕರನ್ನು ಹಿಂಬಾಲಿಸಬೇಕು. ಅವರ ಬೆಂಬಲ ಜಾಲಗಳನ್ನು ಮುರಿಯಬೇಕು. ಅವರ ಹಣಕಾಸು ಮೂಲಗಳನ್ನು ನಾಶ ಮಾಡಬೇಕು ಎಂದು ತಿಳಿಸಿದ್ದಾರೆ.
ಜಗತ್ತು ಗಂಭೀರವಾಗಿ ಪರಿಗಣಿಸುವ ಮುಂಚೆಯೇ ನಮ್ಮ ದೇಶವು ಭಯೋತ್ಪಾದನೆಯ ಭೀಕರತೆಯನ್ನು ಎದುರಿಸಿದೆ.