Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಾಲಯ ಕುಸಿತ, 9 ಮಂದಿ ಸಾವು!

ಭಾರೀ ಮಳೆಗೆ ಶಿಮ್ಲಾದಲ್ಲಿ ದೇವಾಲಯ ಕುಸಿತ, 9 ಮಂದಿ ಸಾವು!
ಶಿಮ್ಲಾ , ಸೋಮವಾರ, 14 ಆಗಸ್ಟ್ 2023 (13:02 IST)
ಶಿಮ್ಲಾ : ಭಾರೀ ಮಳೆಗೆ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಶಿವ ದೇವಾಲಯವೊಂದು ಕುಸಿದು ಬಿದ್ದಿದ್ದು ಅವಶೇಷಗಳಡಿ ಸಿಲುಕಿ ಹಲವರ ಸಾವಾಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಭಾರೀ ಮಳೆಯಿಂದಾಗಿ ದೇವಾಲಯ ಕುಸಿದಿದೆ. ಪ್ರಾರ್ಥನೆ ಸಲ್ಲಿಸಲು ಆಗಮಿಸಿದ್ದ ಭಕ್ತರ ಮೇಲೆ ದೇವಾಲಯ ಕುಸಿದಿದೆ. ದೇವಾಲಯದಡಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ತಿಳಿಸಿದ್ದಾರೆ.

ಪೊಲೀಸರು ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ ಅಧಿಕಾರಿಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದುರ್ಘಟನೆಯ ಸಂದರ್ಭ ದೇವಾಲಯದ ಆವರಣದಲ್ಲಿ ಸುಮಾರು 50 ಜನರಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಭಾರೀ ಮಳೆಯ ಪರಿಣಾಮವಾಗಿ ಸಮ್ಮರ್ ಹಿಲ್ನಲ್ಲಿರುವ ಶಿವ ಮಂದಿರ ಕುಸಿದು ಬಿದ್ದಿದೆ. ಸದ್ಯಕ್ಕೆ 9 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯ ಆಡಳಿತವು ಅವಶೇಷವನ್ನು ತೆರವುಗೊಳಿಸಲು ಹಾಗೂ ಸಿಲುಕಿರುವವರನ್ನು ರಕ್ಷಿಸಲು ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯೋತ್ಸವ : ಶಾಸಕ ಇಕ್ಬಾಲ್ ಹುಸೇನ್‌ರಿಂದ 2.70 ಲಕ್ಷ ಲಡ್ಡು ವಿತರಣೆ