ಸದನದಲ್ಲಿ ಕೇವಲ ನಾವು ಹಾಡುವುದಕ್ಕೆ, ಕುಣಿಯುವದಕ್ಕೆ ಮಾತ್ರ ಸೀಮಿತ-ತೇಜಸ್ವಿ ಯಾದವ್‌

geetha
ಸೋಮವಾರ, 12 ಫೆಬ್ರವರಿ 2024 (18:33 IST)
ಬಿಹಾರ :  ಸದನದಲ್ಲಿ ಕೇವಲ ನಾವು ಹಾಡುವುದಕ್ಕೆ, ಕುಣಿಯುವದಕ್ಕೆ ಮಾತ್ರ ಸೀಮಿತವಾಗಿದ್ದೇವೆ ಎಂದು  ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಿಷಾದ ವ್ಯಕ್ತಪಡಿಸಿದ್ದಾರೆ.ಸೋಮವಾರ ಬಿಹಾರ ವಿಧಾನಸಭೆಯಲ್ಲಿ ಸಿಎಂ ನಿತೀಶ್‌ ಕುಮಾರ್‌ ವಿಶ್ವಾಸ ಮತ ಕೋರಲಿದ್ದು, ಇದಕ್ಕೂ ಮುನ್ನ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮಾತನಾಡಿದರು. ತೇಜಸ್ವಿ ಯಾದವ್‌, ನಿತೀಶ್ ಅವರು ಮತ್ತೆ ಪಕ್ಷ ಬದಲಿಸುವುದಿಲ್ಲ‌ ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಬಲ್ಲರೇ ಎಂದು ಸವಾಲೆಸೆದರು.

ನಾವು ಸಮಾಜವಾದಿ ಕುಟುಂಬದಿಂದ ಬಂದಿದ್ದೇವೆ. ನಿತೀಶ್‌ ಕುಮಾರ್‌ ಸಹ ನಮ್ಮ ಕುಟುಂಬದ ಸದಸ್ಯ ಎಂದು ನಾವು ಭಾವಿಸಿದ್ದೇವೆ.  ಪ್ರಧಾನಿ ಮೋದಿ ಆಳ್ವಿಕೆಯನ್ನು ತಡೆಯಬೇಕಿದೆ ಎಂದು ನೀವು ಬಾವುಟ ಹಿಡಿದು ಹೊರಟಿದ್ದ ನೀವು ಈಗ ಅದೇ ಪಕ್ಷ ಸೇರಿದ್ದೀರಿ ಎಂದು ಟೀಕಿಸಿದ ತೇಜಸ್ವಿ ಯಾದವ್‌, ನಿತೀಶ್‌ ಅವರ ಬಗ್ಗೆ ನಮಗೆ ಯಾವತ್ತೂ ಗೌರವವಿದೆ. ನೀವು ರಾಜಭವನದಿಂದ ರಾಜೀನಾಮೆ ನೀಡಿ ಹೊರಬಂದಾಗ ನಮಗೆ ದುಃಖವಾಗಿತ್ತು. ನಾವು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದೆವು ಎಂದಿದ್ದಾರೆ. 
 
ಒಂಬತ್ತು ಬಾರಿ ಸಿಎಂ ಆಗಿ ದಾಖಲೆ ನಿರ್ಮಿಸಿರುವ ನಿತೀಶ್‌ ಅವರನ್ನು ಅಭಿನಂದಿಸುತ್ತೇನೆ. ಆದರೆ  ಈ ನೂತನ ಸರ್ಕಾರವನ್ನು ನಾನು ವಿರೋಧಿಸುತ್ತೇನೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments