Publish Date: Sat, 12 Aug 2023 (18:11 IST)
Updated Date: Sat, 12 Aug 2023 (17:48 IST)
ದೆಹಲಿ : ಅವಿಶ್ವಾಸ ಗೊತ್ತುವಳಿ ಮಂಡನೆಗೆ ಗುರುವಾರ ಉತ್ತರ ನೀಡುವಾಗ ವಾಕ್ಔಟ್ ಮಾಡಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ಲೇವಡಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ಅವರು ಸದನದಿಂದ ಓಡಿಹೋದರು” ಎಂದು ಹೇಳಿದ್ದಾರೆ.
ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕ್ಷೇತ್ರೀಯ ಪಂಚಾಯತ್ ರಾಜ್ ಪರಿಷತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಎರಡು ದಿನಗಳ ಹಿಂದೆ ನಾವು ಸಂಸತ್ತಿನಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ಸೋಲಿಸಿದ್ದೇವೆ. ಅವರು ಹರಡುತ್ತಿದ್ದ ನಕಾರಾತ್ಮಕತೆಯನ್ನು ನಾವು ಸೋಲಿಸಿದ್ದೇವೆ.
ಸತ್ಯ ಏನೆಂದರೆ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯದ ಮೇಲೆ ಮತ ಹಾಕಲು ಹೆದರುತ್ತಿವೆ. ಘಮಾಂಡಿಯಾ ಮೈತ್ರಿಯಲ್ಲಿನ ಬಿರುಕುಗಳನ್ನು ಬಹಿರಂಗಪಡಿಸಬಹುದೆಂಬ ಕಾರಣದಿಂದ ಅವರು ಮತ ಚಲಾಯಿಸಲು ಬಯಸಲಿಲ್ಲ. ಅವರು ಸದನದಿಂದ ಓಡಿಹೋದರು ಎಂದಿದ್ದಾರೆ. ಗುರುವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅವಿಶ್ವಾಸ ನಿರ್ಣಯವನ್ನು ಸೋಲಿಸಲಾಯಿತು.