Select Your Language

Notifications

webdunia
webdunia
webdunia
webdunia

ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾದ ಬಾಲಕಿ ದೇಹ: ರೇಪ್, ಕೊಲೆ ಶಂಕೆ

Teenage girl
ನವದೆಹಲಿ , ಶುಕ್ರವಾರ, 29 ಜುಲೈ 2016 (17:04 IST)
ರಾಷ್ಟ್ರ ರಾಜಧಾನಿಯ ಗಾಂಧಿನಗರದಲ್ಲಿರುವ ಫ್ಲಾಟ್ ಒಂದರಲ್ಲಿ 9 ತರಗತಿಯ ವಿದ್ಯಾರ್ಥಿನಿಯೋರ್ವಳ ಅರ್ಧ ಸುಟ್ಟ ದೇಹ ಪತ್ತೆಯಾಗಿದ್ದು ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಫ್ಲಾಟ್ ಹೊರಗಡೆಯಿಂದ ಚಿಲಕ ಹಾಕಲಾಗಿದ್ದು, ಕಿಟಕಿ ಮೂಲಕ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು  ರಕ್ಷಣಾ ದಳದೊಂದಿಗೆ ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ಒಳ ಹೋದಾಗ ಆಘಾತಕಾರಿ ದೃಶ್ಯ ಕಂಡುಬಂದಿತ್ತು.

ಮೃತಳನ್ನು  ಅಂಜಲಿ ಎಂದು ಗುರುತಿಸಲಾಗಿದ್ದು ಆಕೆ ತಾಯಿ ಮತ್ತು ಸಹೋದರನ ಜತೆಯಲ್ಲಿ ವಾಸಿಸುತ್ತಿದ್ದಳು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಘಟನೆ ನಡೆದಾಗ ಅವರಿಬ್ಬರು ಮನೆಯಲ್ಲಿರಲಿಲ್ಲ.

ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂಜಲಿ ಮನೆಗೆ ಬಂದಿದ್ದಳು. ಬಳಿಕ ಮನೆ ಒಳಗಿನಿಂದ ಹೊಗೆ ಬರಲು ಪ್ರಾರಂಭವಾಗಿದೆ.

ಇದು ಆತ್ಮಹತ್ಯೆಯೋ ಅಥಾ ಕೊಲೆಯೋ ಎಂಬ ಸಂದೇಹದಲ್ಲಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಆದರೆ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲಗೈದಿರುವ ಸಾಧ್ಯತೆಗಳೇ ಹೆಚ್ಚೆಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಜಿತಾ ಮಾನನಷ್ಟ ಮೊಕದ್ದಮೆ: ದೆಹಲಿ ಸಿಎಂ ಕೇಜ್ರಿವಾಲ್‌ಗೆ ಕೋರ್ಟ್ ಜಾಮೀನು