Select Your Language

Notifications

webdunia
webdunia
webdunia
webdunia

ಉದ್ಯೋಗ ಅಭದ್ರತೆ: ಹೋಟೆಲ್ ಟೆರೇಸ್`ನಿಂದ ಜಿಗಿದು ಐಟಿ ಉದ್ಯೋಗಿ ಆತ್ಮಹತ್ಯೆ

ಉದ್ಯೋಗ ಅಭದ್ರತೆ: ಹೋಟೆಲ್ ಟೆರೇಸ್`ನಿಂದ ಜಿಗಿದು ಐಟಿ ಉದ್ಯೋಗಿ ಆತ್ಮಹತ್ಯೆ
ಪುಣೆ , ಶುಕ್ರವಾರ, 14 ಜುಲೈ 2017 (10:51 IST)
ಆಂಧ್ರಪ್ರದೇಶ ಮೂಲದ ಸಾಫ್ಟ್`ವೇರ್ ಇಂಜಿನಿಯರ್ ಹೋಟೆಲ್ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯ ವಿಮಾನ ನಗರದಲ್ಲಿ ನಡೆದಿದೆ. ಕೆಲಸದ ಅಭದ್ರತೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ..

25 ವರ್ಷದ ಗೋಪಿಕೃಷ್ಣ ದುರ್ಗಾದಾಸ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಈ ಹಿಂದೆ ನವದೆಹಲಿ ಮತ್ತು ಹೈದ್ರಾಬಾದ್`ನಲ್ಲೂ ಕೆಲಸ ಮಾಡಿದ್ದರು. 4 ದಿನಗಳ ಹಿಂದಷ್ಟೇ ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಉದ್ಯೋಗದಾತರು ಆತನನ್ನ ಹೋಟೆಲ್ ರೂಮಿನಲ್ಲಿ ಇಟ್ಟಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಸೂಸೈಡ್ ನೋಟ್ ಬರೆದಿಟ್ಟಿರುವ ಟೆಕ್ಕಿ, ಮಣಿಕಟ್ಟು ಕುಯ್ದುಕೊಂಡು, 4 ಅಂತಸ್ತಿನ ಹೋಟೆಲ್`ನ ಟೆರೇಸ್`ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸ್ವಿಮ್ಮಿಂಗ್ ಪೂಲ್ ಬಳಿ ರಕ್ತದ ಮಡುವಿನಲ್ಲಿದ್ದ ಮೃತದೇಹ ಕಂಡ ಹೊಟೆಲ್ ಸಿಬ್ಬಂದಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.

`ಐಟಿ ವಲಯದಲ್ಲಿ ಕೆಲಸದ ಭದ್ರತೆ ಇಲ್ಲ. ನನ್ನ ಕುಟುಂಬವನ್ನ ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಎಂಬ ಭಯ ನನಗೆ ಕಾಎಡುತ್ತಿದೆ. ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ. ನಾವು ಅಷ್ಟು ಬಲಿಷ್ಠವರ್ಗದವರಲ್ಲ ಎಂದು ಸೂಸೈಡ್ ನೋಟ್`ನಲ್ಲಿ ಟೆಕ್ಕಿ ಬರೆದಿದ್ದಾನೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ನಿಮ್ಮ ಬಾಡಿ ಕರೆಕ್ಟ್ ಶೇಪ್ ನಲ್ಲಿದೆ’