Select Your Language

Notifications

webdunia
webdunia
webdunia
webdunia

ರೈಲಿನ ಮೇಲೆ ಸೆಲ್ಫಿ ಸಾಹಸ; ವಿದ್ಯಾರ್ಥಿ ದುರ್ಮರಣ

ರೈಲಿನ ಮೇಲೆ ಸೆಲ್ಫಿ ಸಾಹಸ; ವಿದ್ಯಾರ್ಥಿ ದುರ್ಮರಣ
ಭುವನೇಶ್ವರ , ಶನಿವಾರ, 14 ಜನವರಿ 2017 (13:11 IST)
ಚಲಿಸುತ್ತಿದ್ದ ರೈಲಿನ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ದಾರುಣ ಘಟನೆ ಒಡಿಶಾದಲ್ಲಿ ನಡೆದಿದೆ. 
 
ಝರ್ಸುಗುಡಾ ರೈಲು ನಿಲ್ದಾಣದ ಬಳಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೃತನನ್ನು ರಾಜ್ ಗೋಪಾಲ್ ಗೌರವ್ ಪಾತ್ರಾ ಎಂದು ಗುರುತಿಸಲಾಗಿದೆ. ಆತನ ಜತೆಗಿದ್ದ ಸ್ನೇಹಿತನಿಗೂ ಕೂಡ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. 
 
ಝರ್ಸುಗುಡಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಡಿಪ್ಲೋಮಾ ಓದುತ್ತಿದ್ದ ರಾಜ್ ಗೋಪಾಲ್ ಶುಕ್ರವಾರ ತನ್ನ ಸ್ನೇಹಿತರ ಜತೆ ಸುತ್ತಾಡಲು ಹೋಗಿದ್ದ. ಅದರಲ್ಲಿ ಗಾಯಗೊಂಡಿರುವ ವಿದ್ಯಾರ್ಥಿ ಲೋಕೇಶ್ ದಾಸ್ ಕೂಡ ಇದ್ದ. 
 
ರೈಲು ನಿಲ್ದಾಣದ ಬಳಿ ಹೋದಾಗ ವಿದ್ಯಾರ್ಥಿಗಳು ಅಲ್ಲಿ ಗೂಡ್ಸ್ ರೈಲು ನಿಂತಿದ್ದನ್ನು ನೋಡಿದ ಯುವಕರು ಮೇಲೆ ಹೈ ಟೆನ್ಷನ್ ವಿದ್ಯುತ್ ಲೈನ್ ಇರುವುದ ಪರಿವೆ ಇಲ್ಲದೇ ರಾಜ್ ಗೋಪಾಲ್ ಮತ್ತು ಲೋಕೇಶ್ ರೈಲನ್ನೇರಿದ್ದಾರೆ. ತಕ್ಷಣ ವಿದ್ಯುತ್ ತಗುಲಿ ಗಂಭೀರವಾಗಿ ಗಾಯಗೊಂಡ ರಾಜ್ ಗೋಪಾಲ್ ಸ್ಥಳದಲ್ಲೇ ಮೃತ ಪಟ್ಟರೆ, ಲೋಕೇಶ್ ಗಂಭೀರವಾಗಿ ಗಾಯಗೊಂಡ.
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಧಿ ಭಾವಚಿತ್ರ ತೆಗೆಯುವ ಅವಶ್ಯಕತೆ ಏನಿತ್ತು: ಪ್ರಧಾನಿಗೆ ದೇವೇಗೌಡರ ಪ್ರಶ್ನೆ!