ನವದೆಹಲಿ : ಏರ್ ಇಂಡಿಯಾ ಖರೀದಿಸಿದ್ದ ಟಾಟಾ ಸಮೂಹ ಈಗ ವಿಮಾನ ತಯಾರಿಸಲು ಮುಂದಾಗಿದೆ.
ಹೌದು. ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್ ಮೂಲದ ಏರ್ಬಸ್ ಜೊತೆಗೂಡಿ ಮೇಕ್ ಇನ್ ಇಂಡಿಯಾ ಅಡಿ ಟಾಟಾ ಸಮೂಹ ವಾಯುಸೇನೆಗೆ C-295MW ವಿಮಾನವನ್ನು ನಿರ್ಮಾಣ ಮಾಡಲಿದೆ.
ಗುಜರಾತಿನ ವಡೋದರಾದಲ್ಲಿ ನಿರ್ಮಾಣ ಘಟಕ ಆರಂಭವಾಗಲಿದ್ದು ಪ್ರಧಾನಿ ನರೇಂದ್ರ ಮೋದಿ ಅ.30 ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂ. ಆಗಿದ್ದು ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ.
ಯುರೋಪ್ ಹೊರಗಡೆ ಏರ್ಬಸ್ ಕಂಪನಿ ತನ್ನ ತಯಾರಿಕಾ ಘಟಕ ತೆರೆಯುತ್ತಿರುವುದು ಇದೇ ಮೊದಲಾಗಿರುವ ಕಾರಣ ಈ ಯೋಜನೆ ಭಾರೀ ಮಹತ್ವ ಪಡೆದಿದೆ.