ಇನ್ಫೋಸಿಸ್ ಸಂಸ್ಥೆಯ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣದ ಆರೋಪಿ ರಾಮ್ ಕುಮಾರ್ ಭಾನುವಾರ ಜೈಲಿನಲ್ಲಿಯೇ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಆತನನ್ನು ಚೆನ್ನೈನ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿರಿಸಲಾಗಿತ್ತು.
ಆದರೆ ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ ಎಂದು ರಾಮ್ ಕುಮಾರ್ ಪರ ವಕೀಲರು ಆರೋಪಿಸಿದ್ದಾರೆ.
ಜೈಲ್‌ನ ಗೋಡೆ ಏರಿ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿ ಬಳಿಕ ಅದನ್ನು ಕುತ್ತಿಗೆಗೆ ಬಲವಾಗಿ ಬಿಗಿದುಕೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ತನ್ನ ಪ್ರೀತಿಯನ್ನು ನಿರಾಕರಿಸಿದ್ದಲ್ಲದೇ, ಸಾರ್ವಜನಿಕವಾಗಿ ನನ್ನನ್ನು ಅಪಮಾನ ಮಾಡಿದ್ದಾಳೆ ಎಂಬ ಕೋಪದಲ್ಲಿ ರಾಮ್ ಕುಮಾರ್ ಟೆಕ್ಕಿ ಸ್ವಾತಿಯನ್ನು ಚೆನ್ನೈನ ನುಂಗಮ್ ಬಾಕಮ್ ರೈಲು ನಿಲ್ದಾಣದಲ್ಲಿ ಭೀಕರವಾಗಿ ಕೊಚ್ಚಿ ಕೊಲೆಗೈದಿದ್ದ. ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಕೊನೆಗೆ ಜುಲೈ 2 ರಂದು ತನ್ನ ಸ್ವಗ್ರಾಮ ತಿರುನಲ್ವೇಲಿಯಲ್ಲಿ ರಾಮ್ ಕುಮಾರ್‌ನನ್ನು ಬಂಧಿಸಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ