Select Your Language

Notifications

webdunia
webdunia
webdunia
webdunia

ನಾನು ಮಂಗಳ ಗ್ರಹದಲ್ಲಿ ಸಿಲುಕಿಕೊಂಡಿದ್ದೇನೆ: ಮಂಗಳಯಾನ-2 ಯಾವಾಗ ಕಳುಹಿಸುತ್ತೀರಿ..?

stuck on Mars
ನವದೆಹಲಿ , ಗುರುವಾರ, 8 ಜೂನ್ 2017 (14:46 IST)
ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತೊಂದರೆಯಲ್ಲಿರುವವರಿಗೆ ತಕ್ಷಣ ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ಇಲ್ಲೊಬ್ಬ ವ್ಯಕ್ತಿ ತಾನು ಮಂಗಳ ಗೃಹದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
 
ಇದಕ್ಕೆ ಸುಷ್ಮಾ ಸ್ವರಾಜ್ ಅವರು ತು ಬಾ ಸ್ವಾರಸ್ಯಕರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕರಣ್ ಸೈನಿ ಎಂಬುವವರು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಮಂಗಳ ಗ್ರಹದಲ್ಲಿ ಸಿಲುಕಿದ್ದೇನೆ. 987ದಿನಗಳ ಹಿಂದೆ ಮಂಗಳಯಾನ ಮೂಲಕ ಕಳುಹಿಸಿದ ಆಹಾರ ಖಾಲಿಯಾಗುತ್ತಾ ಬಂತು ಮಂಗಳಯಾನ-2 ಯಾವಾಗ ಕಳುಹಿಸುತ್ತೀರಿ? ಎಂದು ಕೇಳಿದ್ದಾರೆ.
 
ಅದಕ್ಕೆ ಪ್ರತಿಕ್ರಿಯಿಸಿರುವ ಸುಷ್ಮಾ ಸ್ವರಾಜ್, ಮಂಗಳ ಗ್ರಹದಲ್ಲಿ ನೀವು ಸಿಲುಕಿದ್ದರೂ ಅಲ್ಲಿರುವ ಭಾರತೀಯ ರಾಯಭಾರಿ ಕಛೇರಿ ನಿಮಗೆ ಸಹಾಯ ಹಸ್ತ ಚಾಚಲಿದೆ ಎಂದು ಹೇಳಿದ್ದಾರೆ. ಈ ಟ್ವೀಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಸಭೆಯಲ್ಲೂ ಕೋಲಾಹಲ ಸೃಷ್ಟಿಸಿದ ಬಿಜೆಪಿ