ಅನಾರೋಗ್ಯಕ್ಕೀಡಾಗಿರುವ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಸೋಮವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೆಲವೊಂದು ಎಂಡೋಕ್ರಿನೊಲಾಜಿಕಲ್ ಪರೀಕ್ಷೆಗಳು ಪರೀಕ್ಷೆಗಳು ನಡೆಯಲಿವೆ ಎಂದು ತಿಳಿದು ಬಂದಿದೆ.
ಸಚಿವೆ ಸುಷ್ಮಾ ಸಂಜೆ 7.22 ಗಂಟೆಗೆ ಏಮ್ಸ್‌ಗೆ ದಾಖಲಾಗಿದ್ದಾರೆ. ಸಚಿವೆಗೆ ಮಧುಮೇಹ ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿವೆ. ಅವರಿಗೆ ನಾಳೆ ಕೆಲವು ಎಂಡೋಕ್ರಿನೊಲಾಜಿಕಲ್ ಪರೀಕ್ಷೆಗಳನ್ನು ನಡೆಸಬೇಕಿದೆ ಎಂದು ಏಮ್ಸ್ ಹಿರಿಯ ವೈದ್ಯರು ತಿಳಿಸಿದ್ದಾರೆ.
64 ರ ಹರೆಯದ ಸಚಿವೆ ಸುಷ್ಮಾರನ್ನು ಕಾರ್ಡಿಯೋ- ನ್ಯೂರೋ ಸೆಂಟರ್‌ನಲ್ಲಿ ದಾಖಲಿಸಲಾಗಿದ್ದು ಕಾರ್ಡಿಯೋ ಥೊರಾಸಿಕ್ ಕೇಂದ್ರದ ಮುಖ್ಯಸ್ಥ ಬಲರಾಮ್ ಐರಾನ್ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.
ಸುಷ್ಮಾ ಕಳೆದ ಏಪ್ರಿಲ್ ತಿಂಗಳಲ್ಲಿ ಶ್ವಾಶಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ