Publish Date: Wed, 20 Apr 2016 (16:55 IST)
Updated Date: Wed, 20 Apr 2016 (17:03 IST)
ಇಲ್ಲೊಬ್ಬರು ಶಿವಸೇನೆ ಮುಖಂಡರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಮೂಲಕ ಸಂಚಲನ ಉಂಟುಮಾಡಿದ್ದಾರೆ. ಜೈನ್ ಸಮುದಾಯ, ನಗರ ಸಭೆ, ಕಂದಾಯ ಇಲಾಖೆಯ ದುಡಿಯುವ ಸಂಸ್ಕೃತಿ ಕುರಿತು ತೀವ್ರ ನಿರಾಶೆಗೊಂಡ ಸುಶೀಲ್ ಕುಮಾರ್ ಜೈನ್ ಸ್ವಯಂಪ್ರೇರಣೆಯಿಂದ ಇಸ್ಲಾಂ ಧರ್ಮವನ್ನು ಅಪ್ಪಿಕೊಂಡಿದ್ದಾರೆ.
ಇಸ್ಲಾಂ ಧರ್ಮಕ್ಕೆ ಸೇರಿದ ಮೇಲೆ ಅವರ ಹೆಸರು ಮೊಹಮ್ಮದ್ ಅಬ್ದುಲ್ ಸಮದ್ ಎಂದು ಬದಲಾಗಿದೆ. ತಾವು ಸ್ವಯಂಪ್ರೇರಣೆಯಿಂದ ಫೆ. 15ರಂದು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು ಯಾರದ್ದೇ ಒತ್ತಡದಿಂದಲ್ಲ ಎಂದು ಅವರು ಹೇಳಿದರು.
ಮಂಗಳವಾರ ಮಹಾವೀರ ಜಯಂತಿ ಸಂದರ್ಭದಲ್ಲಿ ಶಿವಸೇನೆ ನಾಯಕ ತಾವು ಮತಾಂತರಗೊಂಡ ಸುದ್ದಿಯನ್ನು ಬಹಿರಂಗಗೊಳಿಸಿದರು. ಮುಜಫರ್‌ನಗರ ಜಿಲ್ಲೆಯ ಕಟೌಲಿ ಪಟ್ಟಣದಲ್ಲಿ ಮತಾಂತರಗೊಂಡ ಸುದ್ದಿ ಸಂಚಲನ ಉಂಟುಮಾಡಿದೆ.