ವೈದ್ಯರ ಎಡವಟ್ಟು! ಮಹಿಳೆಯ ಹೊಟ್ಟೆಯೊಳಗೆ ಪತ್ತೆಯಾಗಿದ್ದು ಏನು ಗೊತ್ತಾ?!

Webdunia
ಮಂಗಳವಾರ, 4 ಡಿಸೆಂಬರ್ 2018 (09:21 IST)
ಮುಂಬೈ: ವೈದ್ಯರ ಎಡವಟ್ಟಿನಿಂದಾಗಿ ಮಹಿಳೆಯೊಬ್ಬಳು ಕಳೆದ ಒಂದು ತಿಂಗಳಿನಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸಬೇಕಾಗಿ ಬಂದಿದೆ. ಇದು ನಡೆದಿರುವುದು ಮುಂಬೈಯಲ್ಲಿ.


ಹೆರಿಗೆಗೆಂದು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಸಿಸೇರಿಯನ್ ಮಾಡಬೇಕಾಗಿ ಬಂತು. ವೈದ್ಯರು ಸಿಸೇರಿಯನ್ ಮೂಲಕ ಮಗುವನ್ನೇನೋ ಯಶಸ್ವಿಯಾಗಿ ಹೊರತೆಗೆದಿದ್ದರು. ಆದರೆ ಹೆರಿಗೆಯಾದ ಕೆಲವೇ ನಿಮಿಷಗಳಲ್ಲಿ ಮಹಿಳೆಯ ದೇಹ ನೀಲಿಗಟ್ಟಿತ್ತು. ಏನೇನು ಮಾಡಿದರೂ ಇಲ್ಲಿನ ವೈದ್ಯರಿಗೆ ಇದರ ಹಿಂದಿನ ಮರ್ಮ ಗೊತ್ತಾಗಲಿಲ್ಲ.

ಕೊನೆಗೆ ಮಹಿಳೆಯನ್ನು ನಗರದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಯಿತು. ಸಾಕಷ್ಟು ಪರೀಕ್ಷೆ ಮಾಡಿದ ವೈದ್ಯರಿಗೆ ಕೊನೆಗೆ ಮಹಿಳೆಯ ಹೊಟ್ಟೆಯೊಳಗೆ ಏನೋ ವಸ್ತು ಇರುವುದು ಪತ್ತೆಯಾಯಿತು. ಪರೀಕ್ಷಿಸಿ ನೋಡಿದಾಗ ಸರ್ಜಿಕಲ್ ಸಲಕರಣೆಯೊಂದು ಹೊಟ್ಟೆಯೊಳಗಿದೆ ಎನ್ನುವುದು ಗೊತ್ತಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಸಿಸೇರಿಯನ್ ಹೆರಿಗೆ ಮಾಡುವಾಗ ಮಹಿಳೆಯ ದೇಹದೊಳಗೆ ಸರ್ಜಿಕಲ್ ಸಲಕರಣೆ ಬಾಕಿ ಉಳಿಸಿ ಎಡವಟ್ಟು ಮಾಡಿದ್ದರು. ಕೊನೆಗೆ ಇದೀಗ ಮಹಿಳೆಯ ದೇಹದಿಂದ ಆ ವಸ್ತುವನ್ನು ಹೊರತೆಗೆಯಲಾಗಿದೆ. ಹಾಗಿದ್ದರೂ ಆಕೆಯ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಇನ್ನು, ಆಕೆಯ ನವಜಾತ ಮಗು ಇದುವರೆಗೆ ಅಮ್ಮನನ್ನೇ ನೋಡಿಲ್ಲ. ಮಗುವಿಗೆ ಫಾರ್ಮುಲಾ ಹಾಲುಣಿಸಲಾಗುತ್ತಿದೆ ಎನ್ನಲಾಗಿದೆ. ಇದೀಗ ಮಹಿಳೆಯ ಪತಿ ವೈದ್ಯಕೀಯ ಕೌನ್ಸಿಲ್ ಗೆ ವೈದ್ಯರ ಎಡವಟ್ಟಿನ ಬಗ್ಗೆ ದೂರು ನೀಡಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments